
ಬೆಂಗಳೂರು: 2017ನೆ ವರ್ಷದ ಸಾರ್ವತ್ರಿಕ ರಜಾ ಹಾಗೂ ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
22 ಸಾರ್ವತ್ರಿಕ ರಜಾ ದಿನ ಹಾಗೂ 17 ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 9ರ ಮಹಾವೀರ ಜಯಂತಿ, ಅ.1 ರಂದು ಬರುವ ಮೊಹರಂ ಕಡೇ ದಿನ ಭಾನುವಾರ ಬಂದಿರುವುದರಿಂದ ರಜಾ ದಿನಗಳ ಪಟ್ಟಿಯಲ್ಲಿ ಸೇರಿಸಿಲ್ಲ.
ಮುಸ್ಲಿಂ ಸಮುದಾಯದ ಹಬ್ಬಗಳು ನಿಗದಿಪಡಿಸಿದ ದಿನಾಂಕದಂದು ಆಚರಣೆಯಾಗದಿದ್ದರೆ ಬದಲಿ ಹಬ್ಬದ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.ಅಕ್ಟೋಬರ್ 17 ರಂದು ನಡೆಯುವ ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 4 ರಂದು ಜರುಗುವ ಹುತ್ತರಿಹಬ್ಬ ಆಚರಣೆಯ ರಜೆಯನ್ನು ಕೊಡಗು ಜಿಲ್ಲೆಗೆ ಸೀಮಿತವಾಗಿ ಘೋಷಿಸಲಾಗಿದೆ.
ನೂತನ ವರ್ಷಾರಂಭವಾದ ಜನವರಿ 1, ಮಧ್ವನವಮಿಯ ಫೆಬ್ರವರಿ 5, ಹೋಳಿಹಬ್ಬ ಮಾರ್ಚ್ 12, ಏ.30 ಶಂಕರಾಚಾರ್ಯ ಜಯಂತಿ, ಸೆ. 17ರ ವಿಶ್ವಕರ್ಮ ಜಯಂತಿ, ಡಿ.24ರ ಕ್ರಿಸ್‍ಮಸ್ ಈವ್ , ಏಪ್ರಿಲ್ 14ರ ಸೌರಮಾನ ಯುಗಾದಿ, ಮೇ 1 ರಂದು ರಾಮಾನುಜಾಚಾರ್ಯರ ಜಯಂತಿ ರಜೆ ಪಟ್ಟಿಯಲ್ಲಿ ಒಳಗೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಜ.14 ರಂದು ಸಂಕ್ರಾಂತಿ ಹಬ್ಬ, ಜ.26 ಗಣರಾಜ್ಯೋತ್ಸವ, ಫೆ.24 ಮಹಾ ಶಿವರಾತ್ರಿ, ಮಾ.29 ಚಂದ್ರಮಾನ ಯುಗಾದಿ, ಏ.14ಗುಡ್ ಫ್ರೈಡೆ, ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಏ.29 ಬಸವ ಜಯಂತಿ, ಮೇ 1 ಕಾರ್ಮಿಕರ ದಿನಾಚರಣೆ, ಜೂ.26 ರಂಜಾನ್, ಆ.15 ಸ್ವಾತಂತ್ರ್ಯ ದಿನಾಚರಣೆ, ಆ.25 ವರಸಿದ್ಧಿ ವಿನಾಯಕ ವ್ರತ, ಸೆ.2 ಬಕ್ರೀದ್, ಸೆ.19 ಮಹಾಲಯ ಅಮಾವಾಸ್ಯೆ, ಸೆ.29 ಮಹಾನವಮಿ, ಆಯುಧಪೂಜೆ, ಸೆ.30 ವಿಜಯದಶಮಿ, ಅ.2 ಗಾಂಧಿಜಯಂತಿ, ಅ.5 ಮಹರ್ಷಿ ವಾಲ್ಮೀಕಿ ಜಯಂತಿ, ಅ.18 ನರಕ ಚತುರ್ದಶಿ, ಅ.20 ಬಲಿಪಾಡ್ಯಮಿ, ನ.1 ಕನ್ನಡ ರಾಜ್ಯೋತ್ಸವ, ನ.6 ಕನಕದಾಸ ಜಯಂತಿ, ಡಿ.1 ಈದ್ ಲಾದ್, ಡಿ.25 ಕ್ರಿಸ್‍ಮಸ್ ರಜೆಗಳನ್ನು ಘೋಷಿಸಲಾಗಿದೆ.
Advertisement