ಫೋರ್ಟಿಸ್ ಲಾ ಫೆಮೆಯಿಂದ ಸ್ತನ ಕ್ಯಾನ್ಸರ್ ಜಾಗೃತಿ

ಫೋರ್ಟಿಸ್ ಲಾ ಫೆಮೆಯಿಂದ ನವೆಂಬರ್ 27ರಂದು ಬೆಂಗಳೂರಿನಲ್ಲಿ ಸ್ತನ ಕ್ಯಾನ್ಸರ್ ಅರಿವು ಮೂಡಿಸುವಿಕೆಯನ್ನು ಬೆಂಬಲಿಸಲು ಮೊಟ್ಟ ಮೊದಲ ಮಹಿಳಾ ರ್ಯಾಲಿ ಆಯೋಜಿಸಲಾಗಿತ್ತು.
ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಫೋರ್ಟಿಸ್ ಲಾ ಫೆಮೆಯಲ್ಲಿ ಬೈಕ್ ರ್ಯಾಲಿ
ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಫೋರ್ಟಿಸ್ ಲಾ ಫೆಮೆಯಲ್ಲಿ ಬೈಕ್ ರ್ಯಾಲಿ

ಬೆಂಗಳೂರು: ಫೋರ್ಟಿಸ್ ಲಾ ಫೆಮೆಯಿಂದ ನವೆಂಬರ್ 27ರಂದು ಬೆಂಗಳೂರಿನಲ್ಲಿ ಸ್ತನ ಕ್ಯಾನ್ಸರ್ ಅರಿವು ಮೂಡಿಸುವಿಕೆಯನ್ನು ಬೆಂಬಲಿಸಲು ಮೊಟ್ಟ ಮೊದಲ ಮಹಿಳಾ ರ್ಯಾಲಿ ಆಯೋಜಿಸಲಾಗಿತ್ತು. ಸ್ತನ ಕ್ಯಾನ್ಸರ್ ಸದ್ಯ ಭಾರತದ ಬಹುತೇಕ ನಗರಗಳಲ್ಲಿ ಅತ್ಯಂತ ಪ್ರಮುಖ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 2ನೇ ಅತ್ಯಂತ ಪ್ರಮುಖ ರೋಗವಾಗಿದೆ. ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸ್ವಯಂ ಅರಿವಿನ ಕೊರತೆ ಇದೆ ಎಂಬುದು ಬಹುತೇಕ ಸಾಬೀತಾಗಿದೆ.

ದೆಹಲಿ ಮತ್ತು ಬೆಂಗಳೂರಿನಲ್ಲಿ ಫೋರ್ಟಿಸ್ ಲಾ ಫೆಮೆ 2 ತಿಂಗಳವರೆಗೆ ವಿಶೇಷ ಕ್ಯಾಂಪೇನ್ ನಡೆಸಿದ್ದು, ಸ್ತನದ ಸ್ವಯಂ ತಪಾಸಣೆ ಹಾಗೂ ಮ್ಯಾಮೋಗ್ರಫಿ ಮತ್ತು ಸ್ತನ ತಪಾಸಣೆಯನ್ನು ತಿಳಿದುಕೊಳ್ಳಲು ಪ್ರೋತ್ಸಾಹಿಸಿದೆ. ಇದರ ಜತೆಗೆ, ಭಾರತದ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ 100 ಹಿಂದುಳಿದ ಮಹಿಳೆಯರಿಗೆ ಉಚಿತ ಮ್ಯಾಮೋಗ್ರಫಿ ನಡೆಸಲು ಅವಕಾಶ ನೀಡಿದೆ. ಆರಂಭದಲ್ಲೇ ಗುರುತಿಸಿದರೆ ಸ್ತನ ಕ್ಯಾನ್ಸರ್‍ಗೆ ಚಿಕಿತ್ಸೆ ನೀಡಬಹುದು ಎಂಬುದೇ ಜಾಗೃತಿ ಮೂಡಿಸುವ ಮುಖ್ಯ ಉದ್ದೇಶವಾಗಿದೆ.

ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಕಳೆದ ಅಕ್ಟೋಬರ್‍ನಲ್ಲಿ ಆರಂಭವಾಗಿರುವ ಫೋರ್ಟಿಸ್ ಲಾ ಫೆಮೆ, ಲಾ ಫೆಮೆ ಬ್ರಾಂಡ್ ಆಸ್ಪತ್ರೆಗಳ ಸರಣಿಯಲ್ಲಿ ಎರಡನೆಯದಾಗಿದೆ. ಮಹಿಳೆಯರು ವಿಶೇಷ ವ್ಯಕ್ತಿಗಳಾಗಿದ್ದು, ಅವರಿಗೆ ವಿಶೇಷ ಆರೈಕೆ ಅಗತ್ಯವಿದೆ ಎಂಬ ಕಲ್ಪನೆಯಲ್ಲಿ ಈ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ, ಮಹಿಳೆಯರಿಗಾಗಿಯೇ ಸಮಗ್ರ ಚಿಕಿತ್ಸೆ ಮತ್ತು ಆರೈಕೆಯನ್ನು ರೂಪಿಸಲಾಗಿದ್ದು, ಹುಟ್ಟಿನಿಂದ, ಹದಿಹರೆಯ, ತಾಯ್ತನದವರೆಗೂ ಆರೈಕೆ ಒದಗಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಅಬ್‍ಸ್ಟೆಟ್ರಿಕ್ಸ್, ಗೈನಕಾಲಜಿ, ನಿಯೋನಟಾಲಜಿ, ಅನಸ್ತೇಸಿಯಾ, ಪೀಡಿಯಾಟ್ರಿಕ್ಸ್, ಸಾಮಾನ್ಯ ಮತ್ತು ಲ್ಯಾಪ್ರೋಸ್ಕೋಪಿ ಸರ್ಜರಿ, ಕಾಸ್ಮೆಟಿಕ್ ಸರ್ಜರಿಗಳು ಮತ್ತು ಜೆನೆಟಿಕ್ & ಫೆಟಲ್ ಔಷಧಿ ಸೌಲಭ್ಯವಿವೆ.

ಫೋರ್ಟಿಸ್ ಲಾ ಫೆಮೆ ಸಿಒಒ ಆಗಿರುವ ಅನಿಕಾ ಪರಾಶರ್ ಪ್ರಕಾರ, “ಇದು ರೋಗದ ತೀವ್ರತೆಯ ವಿಚಾರ ಮಾತ್ರವಲ್ಲ, ಇದು ರೋಗದ ಚಿಹ್ನೆಯೂ ಆಗಿದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಫೋರ್ಟಿಸ್ ಲಾ ಫೆಮೆ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಸ್ತನ ಕ್ಯಾನ್ಸರ್ ಜಾಗೃತಿ ಮಾಸವನ್ನು ಆಚರಿಸುವ ನಿಟ್ಟಿನಲ್ಲಿ ಬೆಂಬಲ, ಸೇವೆ ಹಾಗೂ ಸಲಹೆಯನ್ನು ಒದಗಿಸುತ್ತಿದೆ.”

ಮಂತ್ರಿ ಸ್ಕ್ವೇರ್ ಮಾಲ್‍ನಲ್ಲಿ ಮೊಟಾರ್ಡೆ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಜಯಿಸಿದವರಿಗೆ ಫೋರ್ಟಿಸ್ ಲಾ ಫೆಮೆ ಸನ್ಮಾನವನ್ನೂ ಮಾಡಲಾಯಿತು. ಇಲ್ಲಿ ಕ್ಯಾನ್ಸರ್ ಜಯಿಸಿದವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಮತ್ತು ಆರಂಭದಲ್ಲೇ ರೋಗ ಗುರುತಿಸುವಿಕೆಯ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ.

ಈ ಮಹಿಳೆಯರ ಮೋಟಾರ್ಡೆಯ ದೆಹಲಿ ಆವೃತ್ತಿಯ ಉದ್ಘಾಟನೆ ಕಾರ್ಯಕ್ರಮವು ಡಿಸೆಂಬರ್ 4ಕ್ಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com