ಹಣ ಡ್ರಾ ಮಾಡಲು ಆರ್ ಬಿಐ ಮಿತಿ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಹಕಾರ ಸಂಘಗಳು

ಒಂದು ವಾರದಲ್ಲಿ ಇಂತಿಷ್ಟೇ ಹಣ ಡ್ರಾ ಮಾಡಬೇಕೆಂದು ಆದೇಶ ಹೊರಡಿಸಿರುವ ರಿಸರ್ವ್ ಬ್ಯಾಂಕ್ ಕ್ರಮವನ್ನು ಪ್ರಶ್ನಿಸಿ ಉಡುಪಿಯ ಕೆಲವೊಂದು ಸಹಕಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂದು ವಾರದಲ್ಲಿ ಇಂತಿಷ್ಟೇ ಹಣ ಡ್ರಾ ಮಾಡಬೇಕೆಂದು ಆದೇಶ ಹೊರಡಿಸಿರುವ ರಿಸರ್ವ್ ಬ್ಯಾಂಕ್ ಕ್ರಮವನ್ನು ಪ್ರಶ್ನಿಸಿ ಉಡುಪಿಯ ಕೆಲವೊಂದು ಸಹಕಾರ ಸಂಘಗಳು ಹೈಕೋರ್ಟ್ ಮೊರೆ ಹೋಗಿವೆ.

ಅರ್ಜಿ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಅಶೋಕ್ ಬಿ ಹಿಂಚಗೇರಿ ಕೇಂದ್ರ ಸರ್ಕಾರಕ್ಕೆ, ಆರ್ ಬಿಐ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೋ ಆಪರೇಟಿವ್ ಬ್ಯಾಂಕ್ ಗಳಿಗೆ  ನೋಟಿಸ್ ನೀಡಿ ವಿಚಾರಣೆ ಮುಂದೂಡಿದೆ.

ಸೇವಿಂಗ್ಸ್ ಅಕೌಂಟ್ಸ್ ನಿಂದ ವಾರಕ್ಕೆ 24 ಸಾವಿರ ಹಾಗೂ ಕರೆಂಟ್ ಅಕೌಂಟ್ ನಿಂದ ವಾರಕ್ಕೆ 50 ಸಾವಿರ ರೂ ಹಣ ಮಾತ್ರ ಡ್ರಾ ಮಾಡುವಂತೆ ಆರ್ ಬಿ ಐ ನಿರ್ದೇಶನ ನೀಡಿದೆ.  ಆದರೆ ಈ ನೀತಿಯನ್ನು ನಿಲ್ಲಿಸಿ ಗ್ರಾಹಕರಿಗೆ ಎಷ್ಟು ಹಣ ಬೇಕೋ ಅಷ್ಟನ್ನು ಡ್ರಾ ಮಾಡಲು ಅನುವು ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ಆರ್ ಬಿಐ ಗೆ ಸೂಚಿಸಬೇಕೆಂದು ಹೈಕೋರ್ಟ್ ಗೆ ಮೊರೆ ಇಟ್ಟಿವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com