ಜಾರಿ ಬಿದ್ದ ಮಾಜಿ ಸಂಸದ ಸಾಂಗ್ಲಿಯಾನ, ಆಸ್ಪತ್ರೆಗೆ ದಾಖಲು

ಮಾಜಿ ಸಂಸದ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ ಅವರು ವಾಕಿಂಗ್ ಮಾಡುವ ವೇಳೆ ಜಾರಿ ಬಿದ್ದು...
ಎಚ್.ಟಿ.ಸಾಂಗ್ಲಿಯಾನ
ಎಚ್.ಟಿ.ಸಾಂಗ್ಲಿಯಾನ
Updated on
ಬೆಂಗಳೂರು: ಮಾಜಿ ಸಂಸದ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ ಅವರು ವಾಕಿಂಗ್ ಮಾಡುವ ವೇಳೆ ಜಾರಿ ಬಿದ್ದು ಗಾಯಮಾಡಿಕೊಂಡಿದ್ದು, ಚಿಕಿತ್ಸೆಗಾಗಿ ಅವರನ್ನು ಹಾಸ್ಮಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದ ಬಳಿ ವಾಕಿಂಗ್ ಮಾಡುವ ವೇಳೆಯಲ್ಲಿ ಜಾರಿ ಬಿದ್ದಿದ್ದು, ಅವರ ಎಡಗೈ ಮಣಿಕಟ್ಟಿನ ಮೂಳೆಗೆ ಹಾನಿಯಾಗಿದೆ. ಮುಖದ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 
ಗಾಬರಿಯಾಗಬೇಕಾದ ಅಗತ್ಯವೇನಿಲ್ಲ, ಶೀಘ್ರದಲ್ಲಿಯೇ ಅವರು ಗುಣಮುಖರಾಗಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇನ್ನು ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಅವರು ಆಸ್ಪತ್ರೆ ಭೇಟಿ ನೀಡಿ, ಸಾಂಗ್ಲಿಯಾನ ಅವರ ಆರೋಗ್ಯ ವಿಚಾರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com