ಶಿವಮೊಗ್ಗ: ಉತ್ತಮ ತರಬೇತಿ ಇಲ್ಲದ ಕಾರಣ ನಿಗದಿತ ಸ್ಥಳ ತಲುಪಲಿಲ್ಲ ಅಂಬಾರಿ ಹೊತ್ತ ಆನೆ

ಸಾಕಷ್ಟು ತರಬೇತಿ ಇಲ್ಲದ ಕಾರಣ ಚಾಮುಂಡೇಶ್ವರಿ ತಾಯಿ ಪ್ರತಿಮೆ ಹೊತ್ತ ಅಂಬಾರಿ ಹೊತ್ತ ಆನೆ ನಿಗದಿತ ಸ್ಥಳ ತಲುಪುವಲ್ಲಿ ವಿಫಲವಾಗಿದೆ...
ಶಿವಮೊಗ್ಗ ದಸರಾ ಮೆರವಣಿಗೆ
ಶಿವಮೊಗ್ಗ ದಸರಾ ಮೆರವಣಿಗೆ

ಶಿವಮೊಗ್ಗ: ಸಾಕಷ್ಟು ತರಬೇತಿ ಇಲ್ಲದ ಕಾರಣ ಚಾಮುಂಡೇಶ್ವರಿ ತಾಯಿ ಪ್ರತಿಮೆ ಹೊತ್ತ ಅಂಬಾರಿ ಹೊತ್ತ ಆನೆ ನಿಗದಿತ ಸ್ಥಳ ತಲುಪುವಲ್ಲಿ ವಿಫಲವಾಗಿದೆ.

ಮೈಸೂರು ದಸರಾದಂತೆ ಶಿವಮೊಗ್ಗದಲ್ಲೂ ಜಂಬೂಸವಾರಿ ಮೆರವಣಿಗೆ ನಡೆಸಲಾಗುತ್ತದೆ. ಶಿವಮೊಗ್ಗದಲ್ಲಿ ಸಾಗರ ಎಂಬ ಆನೆ ಅಂಬಾರಿ ಹೊತ್ತು ಸಾಗುತ್ತದೆ. ಆದರೆ ಈ ಸಲ ಸಾಗರನಿಗೆ ಸರಿಯಾದ ತರಬೇತಿ ಇಲ್ಲದ ಕಾರಣ, ಅಂಬಾರಿ ಸರಿಯಾಗಿ ನಡೆಯಲ್ಲಿಲ್ಲ.

ಪ್ರತಿ ಭಾರಿ ಮರದ ಅಂಬಾರಿಯನ್ನಿಟ್ಟು ಮೆರವಣಿಗೆ ನಡೆಸಲವಾಗುತ್ತಿತ್ತು. ಆದರೆ ಈ ಸಲ ನಗರ ಕಾರ್ಪೋರೇಷನ್ 25 ಲಕ್ಷ ರೂ ವೆಚ್ಚದಲ್ಲಿ ಬೆಳ್ಳಿ ಅಂಬಾರಿ ಮಾಡಿಸಿತ್ತು. 300 ಕೆಜಿ ತೂಕದ ಬೆಳ್ಳಿ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ವಿಗ್ರಹ ಇಟ್ಟು ಅಂಬಾರಿ ನಡೆಸಲಾಯಿತು.

ಅಂಬಾರಿ ಹೊತ್ತ ಸಾಗರ ಎಂಬ ಆನೆ, ಮಳೆ ಕಾರಣದಿಂದಾಗಿ ಶಿವಮೊಗ್ಗದ ಗೋಪಿ ಸರ್ಕಲ್ ಬಳಿ ಬರುವ ವೇಳೆಗೆ ಆಯ ತಪ್ಪಿತು. ಬಲವಂತವಾಗಿ ಅಂಬಾರಿ ಹೊತ್ತ ಆನೆಯನ್ನು ಬೇಗ ಬೇಗ ಕರೆದೊಯ್ಯಲಾಯಿತು. ಹೀಗಾಗಿ ಗಜಪಡೆ ಲಯ ತಪ್ಪಿದವು. ಜಾರುತ್ತಿದ್ದ ಅಂಬಾರಿಯನ್ನು ಲಾರಿ ಮೂಲಕ ಸಾಗಿಸಲಾಯಿತು. ಸಾಗರ್. ಗೀತಾ ಮತ್ತು ಗಂಗೆ ಎಂಬ ಆನೆಗಳನ್ನು ಮೆರವಣಿಗೆಯಿಂದ ವಾಪಸ್ ಕಳುಹಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com