ಕಾರವಾರ: ಪ್ರವಾಸಕ್ಕೆ ಆಗಮಿಸಿದ್ದ 9 ಮಂದಿಯ ಪೈಕಿ ಮೂವರು ಯುವಕರು ಸಮುದ್ರಪಾಲಾದ ದುರ್ಘಟನೆ ಗುರುವಾರ ಭಟ್ಕಳ ತಾಲೂಕಿನ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. .ಮೃತರು ಮಂಡ್ಯದ ಕೆ.ಆರ್.ಪೇಟೆ ನಿವಾಸಿಗಳಾದ ಕುಮಾರ್(20),ಕಾರ್ತಿಕ್ ಮಂಜೇಗೌಡ(19)ಮತ್ತು ಪುನೀತ್ (26) ಎಂದು ಗುರುತಿಸಲಾಗಿದೆ..ಮಂಡ್ಯದಿಂದ ಒಟ್ಟು 9 ಮಂದಿ ಉತ್ತರ ಕನ್ನಡದ ಪ್ರವಾಸಕ್ಕೆಂದು ಆಗಮಿಸಿದ್ದರು. ಈ ವೇಳೆ ಈಜಲು ಸಮುದ್ರಕ್ಕಿಳಿದ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ..ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಯುವಕರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics