ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಐಹೊಳೆ ಮತ್ತು ಬಾದಾಮಿ ಐತಿಹಾಸಿಕ ಸ್ಥಳಗಳು

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಐಹೊಳೆ ಐತಿಹಾಸಿಕ ಸ್ಥಳಗಳನ್ನು ಪ್ರಸಿದ್ಧ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿವೆ....
ಬಾದಾಮಿ ಮತ್ತು ಐಹೊಳೆ
ಬಾದಾಮಿ ಮತ್ತು ಐಹೊಳೆ
Updated on

ಹುಬ್ಬಳ್ಳಿ: ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಐಹೊಳೆ ಐತಿಹಾಸಿಕ ಸ್ಥಳಗಳನ್ನು ಪ್ರಸಿದ್ಧ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿವೆ.

ರಾಜ್ಯಸರ್ಕಾರ ಮತ್ತು ಯುನೆಸ್ಕೋ ಸಮಿತಿಯೊಂದನ್ನು ರಚಿಸಿತ್ತು, ಆ ಸಮಿತಿ ಅಧ್ಯಯನ ನಡೆಸಿ, ವರದಿ ತಯಾರಿಸಿದ್ದು, ಅಂತಿಮ ವರದಿಯನ್ನು ಯುನೆಸ್ಕೋಗೆ ಸಲ್ಲಿಸಲಾಗಿದೆ.

ಕರ್ನಾಟಕದ ಬಳ್ಳಾರಿಯಲ್ಲಿರುವ ಹಂಪಿ ಹಾಗೂ ಬಾಗಲಕೋಟೆಯ ಪಟ್ಟದ ಕಲ್ಲು ಎರಡು ಸ್ಥಳಗಳನ್ನು ಮಾತ್ರ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಯುನೆಸ್ಕೋ ಸಮಿತಿ ಬಾದಾಮಿ ಮತ್ತು ಐಹೊಳೆ ಪ್ರವಾಸಿ ತಾಣಗಳ ಹೆಸರನ್ನು ಅಂತಿಮಗೊಳಿಸಲಿದೆ. ಹಂಪಿ ಮತ್ತು ಪಟ್ಟದಕಲ್ಲಿನ ಜೊತೆಗೆ ಪಶ್ಚಿಮ ಘಾಟುಗಳನ್ನು  ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಮಹಾಕೂಟ ದೇವಾಲಯವನ್ನು ನಾವುಪಟ್ಟಿಗೆ ಸೇರಿಸಲು ನಾವು ಬಯಸಿದ್ದೆವು ಎಂದು ಸಮಿತಿ ಸದಸ್ಯ ಎಸ್. ರಾಜಶೇಖರ್ ತಿಳಿಸಿದ್ದಾರೆ.

ಬಾದಮಿ, ಐಹೊಳೆ, ಮತ್ತು ಮಹಾಕೂಟಗಳು ಬೆಳಗಾವಿ ಮತ್ತು ಹುಬ್ಬಳ್ಳಿಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಹೆಚ್ಚಿನ ಸಂಖ್ಯೆಯ ಪರ್ವತಾರೋಹಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಬಾದಾಮಿಗೆ ಬರುತ್ತಾರೆ. ಈ ದೇವಾಲಯಗಳು ಇತಿಹಾಸಕಾರರಿಗೆ ಪ್ರಮುಖ ಸ್ಥಳಗಳಾಗಿವೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಸರ್ಕಾರದಿಂದ ಬಾದಾಮಿ ದೇವಾಲಯ ನಿರ್ಲಕ್ಷ್ಯಕ್ಕೊಳಗಾಗಿದೆ. ಮಧ್ಯಮ ವರ್ಗದ ಕುಟುಂಬಗಳು ಇಲ್ಲಿ ಸಾಮಾನ್ಯವಾದ ವಸತಿ ಹೊಂದಲು ಸಾಧ್ಯವಾಗಿಲ್ಲ, ಇಲ್ಲಿ ಸರಿಯಾದ ಊಟದ ವ್ಯವಸ್ಥೆ ಹಾಗೂ ಕುಡಿಯುವ ನೀರಿಲ್ಲ ಹಾಗೂ ಶೌಚಾಲಯ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಸಮಿತಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com