ನಿಗಮ- ಮಂಡಳಿ ಸ್ಥಾನ ಗಿಟ್ಟಿಸಲು ಕಾಂಗ್ರೆಸ್ ಕಾರ್ಯಕರ್ತನಿಂದ ರಾಹುಲ್ ಗಾಂಧಿ ನಕಲಿ ಸಹಿ

ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಲು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿ ಹೆಸರಿನಲ್ಲೇ ನಕಲಿ ಶಿಫಾರಸು ಪತ್ರವೊಂದನ್ನು.....
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಬೆಂಗಳೂರು: ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಲು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿ ಹೆಸರಿನಲ್ಲೇ ನಕಲಿ ಶಿಫಾರಸು ಪತ್ರವೊಂದನ್ನು ಸೃಷ್ಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ನಿವಾಸಿಯಾಗಿರುವ ಸಂತೋಷ ಪಾಟೀಲ ಅವರು ಬಹಳ ವರ್ಷಗಳಿಂದ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದು,ಇವರನ್ನು ಎನ್‌ಡಬ್ಲ್ಯುಕೆಆರ್‌ಟಿಸಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬ ನಕಲಿ ಶಿಫಾರಸು ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರಿಗೆ ನೀಡಿದ್ದಾರೆ.

ರಾಹುಲ್ ಗಾಂಧಿಯಿಂದ ಶಿಫಾರಸು ಪತ್ರ ಬಂದಿದೆ ಎಂದು ನಂಬಿದ್ದ ಪರಮೇಶ್ವರ್ ಎನ್‌ಡಬ್ಲ್ಯುಕೆಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ಸಂತೇಷ್ ಪಾಟೀಲ್ ನೇಮಕ ಮಾಡಲು ಸಿದ್ಧತೆ ನಡೆಸಿದ್ದರು. ಹೀಗಾಗಿ ರಾಹುಲ್ ಗಾಂಧಿಗೆ ಕರೆ ಮಾಡಿ ಪತ್ರದ ಬಗ್ಗೆ ವಿಚಾರಿಸಿದ್ದಾರೆ. ರಾಹುಲ್ ಗಾಂಧಿ ಪ್ರತಿಕ್ರಿಯೆ ಕೇಳಿ ಪರಮೇಶ್ವರ್ ಅವರಿಗೆ ಶಾಕ್ ಆಗಿದೆ. ಕರ್ನಾಟಕದ ಯಾರೋಬ್ಬರಿಗೂ ನಾನು ಶಿಫಾರಸು ಪತ್ರ ನೀಡಿಲ್ಲ ಎಂದು ರಾಹುಲ್ ಸ್ಪಷ್ಟ ಪಡಿಸಿದ್ದಾರೆ.

ನಂತರ ಸಂತೋಷ್ ಪಾಟೀಲ ನಕಲಿ ಶಿಫಾರಸು ಪತ್ರ ನೀಡಿರುವುದು ಬೆಳಕಿಗೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com