ಶಿವಮೊಗ್ಗ: 17ನೇ ಶತಮಾನದ ಕೆಳದಿ ಶಿವಪ್ಪ ನಾಯಕನ ತಾಮ್ರ ಶಾಸನ ಪತ್ತೆ

17 ನೇ ಶತಮಾನದ ಕೆಳದಿ ಶಿವಪ್ಪನಾಯಕನಿಗೆ ಸೇರಿದ ಅಪರೂಪದ ತಾಮ್ರ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪತ್ತೆಯಾಗಿದೆ..,.
ತಾಮ್ರ ಶಾಸನ
ತಾಮ್ರ ಶಾಸನ

ಶಿವಮೊಗ್ಗ: 17 ನೇ ಶತಮಾನದ ಕೆಳದಿ ಶಿವಪ್ಪನಾಯಕನಿಗೆ ಸೇರಿದ ಅಪರೂಪದ ತಾಮ್ರ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪತ್ತೆಯಾಗಿದೆ.

ಸಾಗರ ತಾಲೂಕಿನ ಆನಂದಪುರಂ ಗ್ರಾಮದ ಬಳಿಯ ಯಡಹಳ್ಳಿ ಬಳಿ ಈ ಶಾಸನ ಪತ್ತೆಯಾಗಿದೆ. 6.5 ಇಂಚು ಅಗಲ, 10 ಇಂಚು ಉದ್ದ. 0.5 ಮಿಮಿ ದಪ್ಪ ಇರುವ ಶಾಸನ ಇದಾಗಿದೆ. ಶಾಸನವದ ಮುಂಭಾಗದಲ್ಲಿ 33 ಸಾಲು ಹಾಗೂ ಶಾಸನದ ಹಿಂಭಾಗದಲ್ಲಿ 17 ಸಾಲುಗಳಲ್ಲಿ ಬರೆಯಲಾಗಿದೆ.

ಕೆಳದಿ ಸಂಸ್ಥಾನಕ್ಕೆ ಸೇರಿದ ಶಾಸನ ಇದಾಗಿದ್ದು, ವೀರಭದ್ರ ನಾಯಕ,  ಆತನ ಮೊಮ್ಮಗ ವೆಂಕಟಪ್ಪ ನಾಯಕ ಮತ್ತು ಆತನ ಮಗ ಭದ್ರಪ್ಪ ನಾಯಕನ ಆಡಳಿತದ ಬಗ್ಗೆ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

1632 ರಲ್ಲಿ ವೀರಭದ್ರ ನಾಯಕ ಹರತಾಳ ಪ್ರದೇಶದಲ್ಲಿರುವ ಆನಂದಪುರದ ಸಿದ್ದಲಿಂಗ ದೇವರು ಮತ್ತು ಉತ್ತರಾದಿ ದೇವರುಗಳಿಗೆ ಭೂಮಿಯನ್ನು ಶ್ರಾವಣ ತಿಂಗಳಿನ 15 ನೇ ದಿನ ದಾನವಾಗಿ ನೀಡಿದ್ದರು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com