ಬೆಂಗಳೂರು: ಕೇವಲ 2 ಗಂಟೆಗಳಲ್ಲಿ ಬರೋಬ್ಬರೀ 3 ಸಾವಿರ ಕೇಸ್ ಬುಕ್

ಗುರುವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಂಚಾರಿ ಪೊಲೀಸರು ಕೇವಲ ಎರಡು ಗಂಟೆಯಲ್ಲಿ ಬರೋಬ್ಬರೀ 3,834 ನಿಯಮ ಉಲ್ಲಂಘನೆ ಕೇಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗುರುವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಂಚಾರಿ ಪೊಲೀಸರು ಕೇವಲ ಎರಡು ಗಂಟೆಯಲ್ಲಿ ಬರೋಬ್ಬರೀ 3,834 ನಿಯಮ ಉಲ್ಲಂಘನೆ ಕೇಸ್  ಬುಕ್ ಮಾಡಿದ್ದಾರೆ.

ಪಶ್ಚಿಮ ವಲಯ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ಸಂಬಂಧ 3,834 ಕೇಸು ದಾಖಲಿಸಿದ್ದಾರೆ. ಬೆಳಗ್ಗೆ 6.30 ರಿಂದ 8.30 ರವರೆಗೆ ಸುಮಾರು 342 ಆಟೋ ರಿಕ್ಷಾಗಳು ಸಂಚಾರ ನಿಯಮ ಉಲ್ಲಂಘಿಸಿವೆ.

ಬೆಂಗಳೂರು ನಗರದಲ್ಲಿ 64.84 ಲಕ್ಷ ವಾಹನಗಳಿವೆ. ಪ್ರತಿ ವರ್ಷ ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ಸುಮಾರು 70 ಲಕ್ಷ ಕೇಸುಗಳು ದಾಖಲಾಗುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

2014 ರಲ್ಲಿ 74.37 ಲಕ್ಷ ಕೇಸು ದಾಖಲಾಗಿದ್ದವು. 2015 ರಲ್ಲಿ ನಿಯಮ ಉಲ್ಲಂಘನೆ ಪ್ರಕರಣ ಸಂಖ್ಯೆ ಹೆಚ್ಚಾಗಿದ್ದು, 76.26 ಲಕ್ಷ ಕೇಸುಗಳು ದಾಖಲಾಗಿವೆ, ಸೆಪ್ಟಂಬರ್ ಅಂತ್ಯದವರೆಗೆ ಒಟ್ಟು 66.85 ಲಕ್ಷ ಕೇಸು ದಾಖಲಾಗಿದ್ದು, 17.37 ಲಕ್ಷ ಕೇಸು ತಪ್ಪು ಪಾರ್ಕಿಂಗ್ ಮತ್ತು ಹೆಲ್ಮೆಟ್ ಇಲ್ಲದೇ ಸವಾರಿಗಾಗಿ 13.65 ಲಕ್ಷ ಕೇಸುಗಳು ದಾಖಲಾಗಿವೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಗೆಯೇ ದಂಡದ ಪ್ರಮಾಣವು ಹೆಚ್ಚಿದೆ. ಸೆಪ್ಟಂಬರ್ ವರೆಗೆ 47.55 ಕೋಟಿ ದಂಡದ ಹಣ ಸಂಗ್ರಹವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com