ದುರಸ್ತಿ ಕಾರ್ಯ: ರಿಚ್ ಮಂಡ್ ಸರ್ಕಲ್ ಮೇಲ್ಸೇತುವೆ 40 ದಿನಗಳವರೆಗೆ ಬಂದ್

ದುರಸ್ತಿ ಸಂಬಂಧ ರಿಚ್ ಮಂಡ್ ಸರ್ಕಲ್ ಮೇಲ್ಸೇತುವೆಯನ್ನು ಸಂಚಾರಿ ಪೊಲೀಸರು ನಿನ್ನೆ(ಗುರುವಾರ)ಮುಚ್ಚಿದ್ದಕ್ಕಾಗಿ...
ರಿಚ್ ಮಂಡ್ ರಸ್ತೆ ಮೇಲ್ಸೇತುವೆ
ರಿಚ್ ಮಂಡ್ ರಸ್ತೆ ಮೇಲ್ಸೇತುವೆ
ಬೆಂಗಳೂರು: ದುರಸ್ತಿ ಸಂಬಂಧ ರಿಚ್ ಮಂಡ್ ಸರ್ಕಲ್ ಮೇಲ್ಸೇತುವೆಯನ್ನು ಸಂಚಾರಿ ಪೊಲೀಸರು ನಿನ್ನೆ(ಗುರುವಾರ)ಮುಚ್ಚಿದ್ದಕ್ಕಾಗಿ ಶಾಂತಿ ನಗರ ಸುತ್ತಮುತ್ತ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
ದುರಸ್ತಿ ಕಾರ್ಯಕ್ಕಾಗಿ ರಿಚ್ ಮಂಡ್ ರಸ್ತೆ ಮತ್ತು ಡಬಲ್ ರೋಡ್ ನ್ನು ಸಂಪರ್ಕಿಸುವ ಮೇಲ್ಸೇತುವೆಯನ್ನು ಅಕ್ಟೋಬರ್ 10ರವರೆಗೆ 40 ದಿನಗಳ ಕಾಲ ಮುಚ್ಚಲಾಗುತ್ತದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಹೀಗಾಗಿ ಇದೀಗ ಎಲ್ಲಾ ವಾಹನಗಳು ಮೇಲ್ಸೇತುವೆಯ ಕೆಳಗೆ ಸಂಚರಿಸಬೇಕಾಗಿದೆ. ಇನ್ನು 20 ದಿನ ಕಳೆದ ನಂತರ ಮಿಷನ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಯ ಮೇಲ್ಸೇತುವೆಯನ್ನು 6 ದಿನಗಳವರೆಗೆ ಮುಚ್ಚಲಾಗುತ್ತದೆ. ನಂತರ ಮೇಲ್ಸೇತುವೆಯ ಬದಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಿಚ್ ಮಂಡ್ ರಸ್ತೆಯ ಲೈಫ್ ಸ್ಟೈಲ್ ಮಾಲ್ ನಿಂದ ರಿಚ್ ಮಂಡ್ ಸರ್ಕಲ್ ವರೆಗೆ ಎರಡೂ ಬದಿಗಳಲ್ಲಿ ದುರಸ್ತಿ ಕೆಲಸ ಕೈಗೊಳ್ಳಲಾಗುತ್ತದೆ. ಈ ಕೆಲಸ ಪೂರ್ಣಗೊಳ್ಳಲು ಇನ್ನೂ ನಾಲ್ಕು ತಿಂಗಳು ಬೇಕಾಗಬಹುದು. ಈಗ ನಡೆಯುತ್ತಿರುವ ದುರಸ್ತಿ ಕೆಲಸದಿಂದಾಗಿ ರಿಚ್ ಮಂಡ್ ರಸ್ತೆ, ರಿಚ್ ಮಂಡ್ ಸರ್ಕಲ್, ಡಬಲ್ ರೋಡ್, ಮಿಷನ್ ರೋಡ್, ಹಡ್ಸನ್ ಸರ್ಕಲ್, ಹೊಸೂರು ರಸ್ತೆ ಮತ್ತು ಒಪೆರಾ ಜಂಕ್ಷನ್ ಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ರಿಚ್ ಮಂಡ್ ಸರ್ಕಲ್ ಮೇಲ್ಸೇತುವೆ ಮೇಲೆ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತಿದ್ದು, ಶಾಂತಿ ನಗರ ಬಸ್ ನಿಲ್ದಾಣದಿಂದ ಅನೇಕ ಬಸ್ಸುಗಳು ಓಡಾಡುತ್ತವೆ.
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹೆಚ್ಚುವರಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com