ಚನ್ನವೀರ ಕಣವಿ ದಂಪತಿಗೆ ಆಹ್ವಾನ ನೀಡುತ್ತಿರುವ ಮೇಯರ್ ಹಾಗೂ ಜಿಲ್ಲಾಧಿಕಾರಿ
ರಾಜ್ಯ
ನಾಡೋಜ ಚನ್ನವೀರ ಕಣವಿಗೆ ದಸರಾ ಉದ್ಘಾಟನೆಗೆ ಆಹ್ವಾನ
ನಾಡೋಜ ಕವಿ ಚನ್ನವೀರ ಕಣವಿ ಅವರಿಗೆ ಅಕ್ಟೋಬರ್ 1ರಿಂದ ಆರಂಭವಾಗುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ....
ಧಾರವಾಡ: ನಾಡೋಜ ಕವಿ ಚನ್ನವೀರ ಕಣವಿ ಅವರಿಗೆ ಅಕ್ಟೋಬರ್ 1ರಿಂದ ಆರಂಭವಾಗುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಆಗಮಿಸುವಂತೆ ಮೈಸೂರು ಜಿಲ್ಲಾಧಿಕಾರಿ ರಣದೀಪ್ ಹಾಗೂ ಮೇಯರ್ ಭೈರಪ್ಪ ಅವರು ಅಧಿಕೃತ ಆಹ್ವಾನ ನೀಡಿದರು.
ಇಂದು ಕಲ್ಯಾಣನಗರದಲ್ಲಿರುವ ಕಣವಿ ಅವರ ನಿವಾಸಕ್ಕೆ ಆಗಮಿಸಿದ ರಣದೀಪ್ ಹಾಗೂ ಭೈರಪ್ಪ ಅವರು ಅಕ್ಟೋಬರ್ 1 ರಂದು ದಸರಾಗೆ ಚಾಲನೆ ನೀಡಲು ಆಗಮಿಸುವಂತೆ ಆಹ್ವಾನ ಪತ್ರ ನೀಡಿದರು. ಈ ವೇಳೆ ಧಾರವಾಡ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಸಹ ಉಪಸ್ಥಿತರಿದ್ದರು.
ಅಕ್ಟೋಬರ್ 1 ರಿಂದ 11ರವರೆಗೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಡೆಯಲಿದ್ದು, ಅ. 1 ರಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸುವುದರ ಮೂಲಕ ದಸರಾ-2016ಕ್ಕೆ ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣವಿ ಅವರು ಚಾಲನೆ ನೀಡಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ