ರಾಜ್ಯದ 6 ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯಾಗಿ ಶೀಘ್ರವೇ ಮೇಲ್ದರ್ಜೆಗೆ: ನಿತಿನ್ ಗಡ್ಕರಿ

ರಾಜ್ಯದ ಆರು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌)ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭರವಸೆ ...
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ಹುಬ್ಬಳ್ಳಿ: ರಾಜ್ಯದ ಆರು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌)ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಹೊಸಪೇಟೆ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ- 63 ಸೇರಿದಂತೆ ವಿವಿಧ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕಾರವಾರ-ಕೈಗಾ -ಮುಂಡಗೋಡ- ಬಂಕಾಪುರ-ಸವಣೂರು- ಲಕ್ಷ್ಮೇಶ್ವರ- ಗದಗ-ಗಜೇಂದ್ರಗಡ ಮಾರ್ಗದ 318 ಕಿ.ಮೀ. ರಸ್ತೆ, ಅಣ್ಣಿಗೇರಿ-ನವಲಗುಂದ-ಹೆಬಸೂರ-ಧಾರವಾಡ-ಕಳಸ ಮಾರ್ಗದ 200 ಕಿ.ಮೀ. ರಸ್ತೆ, ನರಗುಂದ-ಜಗಳೂರು ಮಾರ್ಗದ 260 ಕಿ.ಮೀ. ರಸ್ತೆ, ಅಫಜಲಪುರ-ಅಲಮೇಲ್‌-ಇಂಡಿ-ಲೋಕಾಪುರ ಮಾರ್ಗದ 180 ಕಿ.ಮೀ. ರಸ್ತೆ, ಸಂಕೇಶ್ವರ-ಗೋಕಾಕ-ಯರಗಟ್ಟಿ-ನರಗುಂದ ಮಾರ್ಗದ 150 ಕಿ.ಮೀ. ರಸ್ತೆ ಹಾಗೂ ನರಗುಂದ-ರೋಣ-ಗಜೇಂದ್ರಗಡ-ಕುಷ್ಟಗಿ ಮಾರ್ಗದ 150 ಕಿ.ಮೀ. ರಾಜ್ಯ ಹೆದ್ದಾರಿಯನ್ನು ಎನ್‌ಎಚ್‌ ಮಾಡಲಾಗುವುದು ಎಂದರು.

ಬಳ್ಳಾರಿ- ಶಿರಗುಪ್ಪ ರಸ್ತೆ ದ್ವಿಪಥ ಹಾಗೂ ಬಳ್ಳಾರಿ- ಹಿರಿಯೂರು ಚತುಷ್ಪಥ ರಸ್ತೆ ಯೋಜನೆಗೆ ಕೇಂದ್ರ ಸಮ್ಮತಿಸಿದೆ. ಕೊಪ್ಪಳ- ರಾಯಚೂರು  ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com