
ಬೆಂಗಳೂರು: ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿ ಪ್ರಸಿದ್ಧವಾಗಿರುವ ಏರ್ ಏಷ್ಯಾ ವಿಮಾನ ಮತ್ತೊಮ್ಮೆ ಪ್ರಯಾಣಿಕರ ಹಿತ ಕಾಪಾಡುವಲ್ಲಿ ಮುಂದಾಗಿದೆ.
ಕಾವೇರಿ ವಿವಾದದಿಂದಾಗಿ ಬೆಂಗಳೂರಿನಲ್ಲಿ ಸೆಪ್ಟಂಬರ್ 13 ರಂದು ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಮುಂದಿನ 72 ಗಂಟೆಗಳಲ್ಲಿ ಮತ್ತೊಮ್ಮೆ ಪ್ರಯಾಣ ಮಾಡಬಹುದಾಗಿದೆ. ಆದರೆ ಇದಕ್ಕೆ ಏರ್ ಏಷ್ಯಾ ವಿಮಾನ ಸಂಸ್ಥೆ ಯಾವುದೇ ವೆಚ್ಚ ವಿಧಿಸುವುದಿಲ್ಲ ಎಂದು ಹೇಳಿದೆ.
ಸೆಪ್ಬಂಬರ್ 13 ರಂದು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ತೆರಳಲು ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದರು. ಆದರೆ ಕಾವೇರಿ ಗಲಾಟೆಯಿಂದಾಗಿ ಪ್ರಯಾಣಿಸಲು ಸಾಧ್ಯವಾಗಿಲ್ಲ,. ಈ ಹಿನ್ನೆಲೆಯಲ್ಲಿ ಈಗ ಬುಕ್ ಮಾಡಿರುವ ಟಿಕೆಟ್ ನಲ್ಲೇ ಮುಂದಿನ 72 ಗಂಟೆಗಳಲ್ಲಿ ಮತ್ತೆ ಪ್ರಯಾಣಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ನಗರದಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ನಮಗೆ ಅರಿವಿದೆ. ಹೀಗಾಗಿ ಸೆಪ್ಟಂಬರ್ 13ಕ್ಕೆ ಪ್ರಯಾಣ ಮಾಡಲು ನಿಗದಿಗೊಳಿಸಿದ್ದ ಟಿಕೆಟ್ ಅನ್ನು ರದ್ದುಗೊಳಿಸಿ ಮುಂದಿನ 72 ಗಂಟೆಗಳಲ್ಲಿ ಪ್ರಯಾಣಿಸಲು ಏರ್ ಏಷ್ಯಾ ವಿಮಾನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಈ ಸಂಬಂಧ ಪ್ರಯಾಣಿಕರು ನಮ್ಮ ಸಂಸ್ಥೆಯ ಕಾಲ್ ಸೆಂಟರ್ ಗಳಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
Advertisement