
ಮೈಸೂರು: ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದ ಹಿನ್ನಲೆಯಲ್ಲಿ ನಿನ್ನೆ ಮೈಸೂರಿನಲ್ಲಿ ನಡೆಯುತ್ತಿದ್ದ ತಮಿಳು ಚಿತ್ರದ ಶೂಟಿಂಗ್'ಗೆ ಪ್ರತಿಭಟನಾಕಾರರು ಅಡ್ಡಿ ಪಡಿಸಿದ್ದಾರೆ.
15 ಮಂದಿ ಜನರಿದ್ದ ಗುಂಪೊಂದು ಮಂಗಳವಾರ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಗೆ ನುಗ್ಗಿದ್ದರು. ಈ ವೇಳೆ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರತಿ ಭಟನಾಕಾರರು ನುಗ್ಗುತ್ತಿದ್ದಂತೆ ಅಲ್ಲಿದ್ದ ಅತಿಥಿಗಳು ಭಯದಿಂದ ಚದುರಿದರು.
ಮತ್ತೊಂದೆಡೆ ಕೆಲ ಪ್ರತಿಭಟನಾಕಾರರು ಶಿವರಾಮ್ ಪೇಟೆಯಲ್ಲಿರುವ ಶ್ರೀರಾಮ್ ಗೋಲ್ಡ್ ಲೋನ್ ಕಚೇರಿ ಮುಂದೆ ನಿಂತು ದಾಳಿ ನಡೆಸಲು ಯತ್ನಿಸಿದರು. ಈ ವೇಳೆ ಬಂದ ಪೊಲೀಸರು ಗುಂಪನ್ನು ಚದುರಿಸಿದರು.
ಶೂಟಿಂಗ್'ಗೆ ಹಾಕಿದ್ದ ಬ್ಯಾನರ್, ಬೋರ್ಡ್, ಬಾವುಟ ಕಿತ್ತೆಸೆದ ಕಾರ್ಯಕರ್ತರು, ತಮಿಳುನಾಡು ಬಾವುಟಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
Advertisement