ಕೆಪಿಎನ್ ಬಸ್ ಗಳಿಗೆ ಬೆಂಕಿ ಪ್ರಕರಣ: 7 ಮಂದಿ ಬಂಧನ

ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಮತ್ತು ತಮಿಳುನಾಡಿಗೆ ನೀರ ಬಿಡುಗಡೆ ಮಾಡುತ್ತಿರುವುದನ್ನು ರಾಜ್ಯ....
ಹೊತ್ತಿ ಉರಿಯುತ್ತಿರುವ ಕೆಪಿಎನ್ ಬಸ್ ಗಳು
ಹೊತ್ತಿ ಉರಿಯುತ್ತಿರುವ ಕೆಪಿಎನ್ ಬಸ್ ಗಳು

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಮತ್ತು ತಮಿಳುನಾಡಿಗೆ ನೀರ ಬಿಡುಗಡೆ ಮಾಡುತ್ತಿರುವುದನ್ನು ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆದಿದ್ದ ಗಲಭೆ ವೇಳೆ ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ ಬಸ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಬುಧವಾರ ಏಳು ಮಂದಿಯನ್ನು ಬಂಧಿಸಿದ್ದಾರೆ.

ಕಳೆದ ಸೋಮವಾರ ಬೆಂಗಳೂರು-ಮೈಸೂರು ರಸ್ತೆಯಲ್ಲಿದ್ದ ಕೆಪಿಎನ್ ಡಿಪೋಗೆ ನುಗ್ಗಿದ್ದ ಏಳು ಮಂದಿ ಸುಮಾರು 35ಕ್ಕೂ ಹೆಚ್ಚು ಬಸ್ ಗಳಿಗೆ ಬೆಂಕಿಹಚ್ಚಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್ ಪರಿಶೀಲನೆ ಬಳಿಕ ಆರೋಪಿಗಳನ್ನು ಪತ್ತೆಹಚ್ಚಿರುವ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ರಕ್ಷಿತ್ (18), ಸತೀಶ್ (27) ಕೆಂಪೇಗೌಡ (28), ಪ್ರಕಾಶ್ (46), ಲೋಕೇಶ್ (25), ಚಂದನ್ ಎಂದು ಗುರುತಿಸಲಾಗಿದೆ.

ಈ ಎಲ್ಲಾ ಏಳು ಆರೋಪಿಗಳು ಡಿಸೋಜಾ ನಗರ, ವೀರ ಭದ್ರನಗರ ನಿವಾಸಿಗಳಾಗಿದ್ದು ಪೀಣ್ಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com