ಬೆಂಗಳೂರು: ಚಲಿಸುತ್ತಿದ್ದ ಆಟೋದಿಂದ ನವಜಾತ ಶಿಶುವನ್ನು ಎಸೆದ ಪಾಪಿಗಳು

ಚಲಿಸುತ್ತಿದ್ದ ಆಟೋರಿಕ್ಷಾದಿಂದ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋಗಿರುವ ಘಟನೆ ಯಶವಂತಪುರ ..
ವಾಣಿ ವಿಲಾಸ ಆಸ್ಪತ್ರೆ
ವಾಣಿ ವಿಲಾಸ ಆಸ್ಪತ್ರೆ

ಬೆಂಗಳೂರು: ಚಲಿಸುತ್ತಿದ್ದ ಆಟೋರಿಕ್ಷಾದಿಂದ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋಗಿರುವ ಘಟನೆ ಯಶವಂತಪುರ ಬಿಬಿಎಂಪಿ ಆಸ್ಪತ್ರೆ ಬಳಿ ಸಂಭವಿಸಿದೆ.

ಮಗುವನ್ನು ಎಸೆದು ಹೋದದನ್ನು ನೋಡಿದ ಇಬ್ಬರು ಸಾಮಾಜಿಕ ಕಾರ್ಯಕರ್ತರು ಕೂಡಲೇ ಅ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ನಂತರ ಇಬ್ಬರು ನವಜಾತ ಹೆಣ್ಣು ಶಿಶುವನ್ನು  ವಾಣಿ ವಿಲಾಸ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೇ ಅಷ್ಟರಲ್ಲಾಗಲೇ ಮಗು ಸಾವನವ್ನಪ್ಪಿತ್ತು.

ಜ್ಯೋತಿ ಮತ್ತು ಸರಸ್ವತಿ ಎಂಬ ಇಬ್ಬರು ಸಮಾಜ ಸೇವಕರು, ಮಧ್ಯಾಹ್ನ ಸುಮಾರು 2.35 ರ ವೇಳೆಗೆ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಬಂದರು. ಇದೊಂದು ಅವಧಿ ಪೂರ್ವ ಹೆಣ್ಣು ಮಗುವಾಗಿತ್ತು. ಒಂದೂವರೆ ಕೆಜಿ ತೂಕವಿದ್ದ ಹೆಣ್ಣು ಮಗು ಆರೋಗ್ಯವಾಗಿತ್ತು ಎಂದು ವಾಣಿ ವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಲತಾ ಅವರು ತಿಳಿಸಿದ್ದಾರೆ.

ಇಬ್ಬರು ಸಮಾಜ ಸೇವಕರು ನೀಡಿದ ಹೇಳಿಕೆ ಆಧಾರದ ಮೇಲೆ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ, ಆದರೆ ಆಟೋ ದಲ್ಲಿ ಬಂದು ನವಜಾತ ಶಿಶುವನ್ನು ಎಸೆದ ಬಗ್ಗೆ ನಮಗದೆ ಸರಿಯಾದ ಮಾಹಿತಿ ಇಲ್ಲ, ಕಾವೇರಿ ಹೋರಾಟ ಸಂಬಂಧ ಕರೆ ನೀಡಿದ್ದ ರೈಲು ಬಂದ್ ಭದ್ರತೆಗಾಗಿ ಯಶವಂತಪುರ ರೈಲ್ವೆ ನಿಲ್ಗಾಣಕ್ಕೆ ತೆರಳಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com