ಚಿಕ್ಕಪೇಟೆ ಅಗ್ನಿ ಅವಘಡಕ್ಕೆ ಹೊಸ ತಿರುವು, ವಿಮೆಗಾಗಿ ತನ್ನ ಅಂಗಡಿಗೆ ಬೆಂಕಿ ಇಟ್ಟ ಮಾಲೀಕನ ಬಂಧನ

ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಗೂಡ್ಸ್ ಮಳಿಗೆಯಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡ ಹೊಸ ತಿರುವು ಪಡೆದಿದ್ದು...
ಹೊತ್ತಿ ಉರಿದ ಮಳಿಗೆಯ ಚಿತ್ರ
ಹೊತ್ತಿ ಉರಿದ ಮಳಿಗೆಯ ಚಿತ್ರ
ಬೆಂಗಳೂರು: ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಗೂಡ್ಸ್ ಮಳಿಗೆಯಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡ ಹೊಸ ತಿರುವು ಪಡೆದಿದ್ದು, ವಿಮೆಗಾಗಿ ತನ್ನ ಅಂಗಡಿಗೆ ಬೆಂಕಿ ಹಚ್ಚಿದ ಮಾಲೀಕನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ ರಸ್ತೆಯಲ್ಲಿರುವ ಮಾಯಾ ಎಲೆಕ್ಟ್ರಿಕ್ ಶಾಪ್ ಗೆ ಬೆಂಕಿ ಬಿದ್ದು, ಒರ್ವ ವ್ಯಕ್ತಿ ಸಜೀವ ದಹನವಾಗಿದ್ದರು. ವಿಮೆ ಹಣದ ಆಸೆಗಾಗಿ ಮಾಲೀಕ ನರೇಂದ್ರ ಲಾಲ್ ಚೌಧರಿ ತನ್ನ ಸ್ನೇಹಿತರ ಜೊತೆ ಸೇರಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಚಿಕ್ಕಪೇಟೆ ಪೊಲೀಸರು ಶಾಪ್ ಮಾಲೀಕ ನರೇಂದ್ರ ಲಾಲ್ ಚೌಧರಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ನರೇಂದ್ರ ಲಾಲ್ ಚೌಧರಿ, ಗಜೇಂದ್ರ ಮತ್ತು ಅರುಣ್ ಕುಮಾರ್ ವಿಮೆ ಹಣದ ಆಸೆಗಾಗಿ ಅಂಗಡಿಗೆ ಬೆಂಕಿ ಇಡುವ ಸಂಚು ರೂಪಿಸಿದ್ದರು. ಅದರಂತೆ ಅಂಗಡಿಗೆ ಬೆಂಕಿ ಇಟ್ಟ ಬಳಿಕ ಗಜೇಂದ್ರ ಅವರು ಹೊರಬರಲಾರದೆ ಅಲ್ಲೇ ಸಜೀವವಾಗಿ ದಹನವಾಗಿದ್ದರು. ಈ ಅಗ್ನಿ ದುರಂತದಲ್ಲಿ ಗಜೇಂದ್ರ ಜೊತೆ ಬಂದಿದ್ದ ಅರುಣ್ ಕುಮಾರ್ ಅವರು ಗಾಯಗೊಂಡಿದ್ದಾರೆ. ಕಟ್ಟಡ ಗೋಡಾನ್‌ನಲ್ಲಿ ಶಾರ್ಟ್ ಸರ್ಕಿಟ್ ಆಗುವಂತೆ ಮಾಡಿ ಬೆಂಕಿ ಹೊತ್ತಿಸಲಾಗಿತ್ತು. ಆದ್ದರಿಂದ, ಎಲೆಕ್ಟ್ರಿಕಲ್ ಮಾಲೀಕನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com