ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಯರಬೈಲು ಗ್ರಾಮದ 55 ವರ್ಷದ ಜುಡು ಮಾಕುಡಿಪಡೆ ತನ್ನ ಸಾಕುನಾಯಿಯೊಂದಿಗೆ ದನಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದರು. ಆ ವೇಳೆ ಕಾಡಿನಲ್ಲಿ ಮೂರು ಕರಡಿಗಳು ಜುಡು ಅವರ ಮೇಲೆ ದಾಳಿಗೆ ಮುಂದಾಗಿದೆ ಇದರಿಂದ ಭಯಗೊಂಡ ಅವರು ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಕಿರುಚಾಡಿದ್ದಾರೆ. ಆಗ ನಾಯಿಯು ಎರಡು ಕರಡಿಗಳನ್ನು ಅಟ್ಟಾಡಿಸಿ ಓಡಿಸಿದೆ. ಆದರೆ ಮತ್ತೊಂದು ಕರಡಿ ಜುಡು ಅವರನ್ನು ಹಿಡಿದು ಎಳೆದಾಡಿದ್ದು ಅವರ ಕೈ, ತಲೆ ಹಾಗೂ ದೇಹದ ಮೇಲೆ ಗಂಭೀರ ಗಾಯಗಳಾಗಿವೆ.