ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ: ಡಿಕೆ ರವಿ ಸಹೋದರ ರಮೇಶ್ ಗೆ ಗಂಭೀರ ಗಾಯ

ನಿಗೂಢವಾಗಿ ಸಾವನ್ನಪ್ಪಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಹೋದರ ಡಿಕೆ ರಮೇಶ್ ಎಂಬುವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ...
ಡಿಕೆ ರವಿ ಸಹೋದರ
ಡಿಕೆ ರವಿ ಸಹೋದರ
ಹುಲಿಯೂರು ದುರ್ಗ: ನಿಗೂಢವಾಗಿ ಸಾವನ್ನಪ್ಪಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಹೋದರ ಡಿಕೆ ರಮೇಶ್ ಎಂಬುವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ರವಿ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. 
ಕಳೆದ ರಾತ್ರಿ ಡಿಕೆ ರಮೇಶ್ ಅವರು ಬೈಕ್ ನಲ್ಲಿ ತೆರಳುತ್ತಿದ್ದಾಗ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಕಂಪಲಾಪುರ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು ರಮೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. 
ರಮೇಶ್ ಬೈಕ್ ನಲ್ಲಿ ಹುಲಿಯೂರು ದುರ್ಗದಿಂದ ಸ್ವಗ್ರಾಮ ದೊಡ್ಡ ಕೊಪ್ಪಲಿಗೆ ಬರುತ್ತಿದ್ದಾಗ ಕಂಪಲಾಪುರದ ಬಳಿ ಸೈಕಲ್ ವೊಂದು ಅಡ್ಡಬಂದಿದೆ. ಈ ವೇಳೆ ಸೈಕಲ್ ಗೆ ಬೈಕ್ ಗುದ್ದಿದ್ದು ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಗುದ್ದಿದ್ದು ರಮೇಶ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com