ಉತ್ತಿಷ್ಠ ಭಾರತದಿಂದ ಲಿವಿಂಗ್ ಧರ್ಮ ಕಾರ್ಯಾಗಾರ ಆಯೋಜನೆ

ಉತ್ತಿಷ್ಠ ಭಾರತ ಸಂಘಟನೆ ಲಿವಿಂಗ್ ಧರ್ಮ ಎಂಬ ಶೀರ್ಷಿಕೆಯಡಿ ಎರಡು ದಿನಗಳ ಕಾರ್ಯಾಗಾರ ಆಯೋಜಿಸಿದ್ದು ಸೆ.24-25 ರಂದು ನಡೆಯಲಿದೆ.
ಉತ್ತಿಷ್ಠ ಭಾರತದಿಂದ ಲಿವಿಂಗ್ ಧರ್ಮ ಕಾರ್ಯಾಗಾರ ಆಯೋಜನೆ
ಉತ್ತಿಷ್ಠ ಭಾರತದಿಂದ ಲಿವಿಂಗ್ ಧರ್ಮ ಕಾರ್ಯಾಗಾರ ಆಯೋಜನೆ
Updated on

ಬೆಂಗಳೂರು: ಉತ್ತಿಷ್ಠ ಭಾರತ ಸಂಘಟನೆ ಲಿವಿಂಗ್ ಧರ್ಮ ಎಂಬ ಶೀರ್ಷಿಕೆಯಡಿ ಎರಡು ದಿನಗಳ ಕಾರ್ಯಾಗಾರ ಆಯೋಜಿಸಿದ್ದು ಸೆ.24-25 ರಂದು ನಡೆಯಲಿದೆ.

ಮಹಾ ಅಕಾಡೆಮಿಯ ಅಧ್ಯಕ್ಷ ಡಾ. ಮನೀಷ್ ಮೋಕ್ಷಗುಂಡಂ, ಲಿವಿಂಗ್ ಧರ್ಮ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಜೀವನ ವಿಧಾನವನ್ನು ಸುಧಾರಿಸುವ ಆಧ್ಯಾತ್ಮ ಹಾಗು ವಿಜ್ಞಾನದ ಮಹತ್ವವನ್ನು ತಿಳಿಸಿಕೊಡಲಿದ್ದಾರೆ. 2 ದಿನಗಳ ಕಾರ್ಯಾಗಾರದಲ್ಲಿ ಧ್ಯಾನ, ಯೋಗ, ಪೌರಾತ್ಯ ಸಮಾಜದ ದೃಷ್ಟಿಕೋನ, ಆಂತರಿಕ ಶೋಧ ಹಾಗು ವ್ಯಕ್ತಿತ್ವ ವಿಕಸನದ ತಂತ್ರಗಳನ್ನೂ ಬೋಧಿಸಲಿದ್ದಾರೆ.

ಕನಕಪುರದಲ್ಲಿರುವ ತಾತಗುಣಿ ಬಳಿ ಇರುವ ಸ್ವಾನಂದ ಆಶ್ರಮದಲ್ಲಿ ಬೆಳಿಗ್ಗೆ 9 ರಿಂದ ಲಿವಿಂಗ್ ಧರ್ಮ ಕಾರ್ಯಾಗಾರ ನಡೆಯಲಿದೆ. ಆಸಕ್ತರು  ದೂ: 9964142207 ನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com