ಮೈಸೂರು ದಸರಾ: ರಾಜಮನೆತನದವರಿಗೆ ಸಾಂಪ್ರಾದಾಯಿಕ ಆಹ್ವಾನ ನೀಡಿದ ಜಿಲ್ಲಾಡಳಿತ

ವಿಶ್ವವಿಖ್ಯಾತ ಮೈಸೂರು ದಸರಾಗೆ ಫಲ ತಾಂಬೂಲ ನೀಡುವ ಮೂಲಕ ರಾಜಮನೆತನದವರಿಗೆ ಸಾಂಪ್ರದಾಯಕವಾಗಿ ಜಿಲ್ಲಾಡಳಿತ ಆಹ್ವಾನ ...
ರಾಜ ಮನೆತನವದವರಿಗೆ ಸಾಂಪ್ರಾದಾಯಿಕ ಆಹ್ವಾನ ನೀಡಿದ ಜಿಲ್ಲಾಡಳಿತ
ರಾಜ ಮನೆತನವದವರಿಗೆ ಸಾಂಪ್ರಾದಾಯಿಕ ಆಹ್ವಾನ ನೀಡಿದ ಜಿಲ್ಲಾಡಳಿತ
Updated on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಫಲ ತಾಂಬೂಲ ನೀಡುವ ಮೂಲಕ ರಾಜಮನೆತನದವರಿಗೆ ಸಾಂಪ್ರದಾಯಕವಾಗಿ ಜಿಲ್ಲಾಡಳಿತ ಆಹ್ವಾನ ನೀಡಿತು.

ಪ್ರತಿ ವರ್ಷದಂತೆ ನಾಡಹಬ್ಬ ದಸರಾಗೆ ರಾಜಮನೆತನದವರನ್ನು ತಾಂಬೂಲ ಹಾಗೂ ಗೌರವಧನ ನೀಡಿ ಆಹ್ವಾನ ನೀಡುವುದು ಸಂಪ್ರದಾಯ. ಅದರಂತೆ ಈ ವರ್ಷ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಡಳಿತದ ವತಿಯಿಂದ 36 ಲಕ್ಷ ಚೆಕ್‍ನ ಗೌರವ ರಾಜಧನ ನೀಡುವ ಮೂಲಕ ಜಂಬೂ ಸವಾರಿಗೆ ಸಹಕಾರಿ ನೀಡಿ, ಅಂಬಾರಿಯನ್ನು ನೀಡಬೇಕೆಂದು ಮನವಿ ಮಾಡಲಾಯಿತು.

ಸಹಕಾರ ಸಚಿವ ಹೆಚ್.ಎಸ್ ಮಹದೇವಪ್ರಸಾದ್, ಎಚ್.ಸಿ ಮಹಾದೇವಪ್ಪ, ಜಿಲ್ಲಾಧಿಕಾರಿ ಡಿ.ರಂದೀಪ್ ಸೇರಿದಂತೆ ಇತರರು ಪ್ರಮೋದಾದೇವಿ ಒಡೆಯರ್ ಮತ್ತು ಯದೂವೀರ್ ಅವರನ್ನು ದಸರಾಗೆ ಸಾಂಪ್ರದಾಯಕವಾಗಿ ಆಹ್ವಾನಿಸಿದರು.

ಆಹ್ವಾನ ಸ್ವೀಕರಿಸಿ ಮಾತನಾಡಿದ ನೀಡಿದ ರಾಣಿ ಪ್ರಮೋದಾದೇವಿ ಒಡೆಯರ್, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಹಕಾರ ಇರುತ್ತದೆ ಎಂದು ಉಸ್ತುವಾರಿ ಸಚಿವರಿಗೆ ಭರವಸೆ ನೀಡಿದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಿದ ಅವರು, ಎರಡು ರಾಜ್ಯಗಳು ಸಮಸ್ಯೆಯನ್ನು ಸೌಹಾರ್ದಯುತವಾಗಿ  ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com