ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಾಕ್ ಕಲಾವಿದನ ಸಂಗೀತ ಕಾರ್ಯಕ್ರಮ ರದ್ದು

ಪಾಕಿಸ್ತಾನ ಭಾರತದ ಮೇಲೆ ನಿರಂತರ ಭಯೋತ್ಪಾದಕ ದಾಳಿ ನಡೆಸುತ್ತಿರುವ ಪರಿಣಾಮ ಪಾಕ್ ಮೂಲದ ಕಲಾವಿದರಿಗೂ ತಟ್ಟಿದೆ.
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಾಕ್ ಕಲಾವಿದನ ಸಂಗೀತ ಕಾರ್ಯಕ್ರಮ ರದ್ದು
ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಾಕ್ ಕಲಾವಿದನ ಸಂಗೀತ ಕಾರ್ಯಕ್ರಮ ರದ್ದು

ಬೆಂಗಳೂರು: ಪಾಕಿಸ್ತಾನ ಭಾರತದ ಮೇಲೆ ನಿರಂತರ ಭಯೋತ್ಪಾದಕ ದಾಳಿ ನಡೆಸುತ್ತಿರುವ ಪರಿಣಾಮ ಪಾಕ್ ಮೂಲದ ಕಲಾವಿದರಿಗೂ ತಟ್ಟಿದೆ. ಒಂದೆಡೆ ರಾಷ್ಟ್ರಮಟ್ಟದಲ್ಲಿ ಪಾಕಿಸ್ತಾನದ ಕಲಾವಿದರನ್ನು ಬಹಿಷ್ಕರಿಸುವ ಮಾತುಗಳು ಕೇಳಿಬರುತ್ತಿದ್ದರೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪಾಕ್ ಸಂಗೀತಕಾರರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಸೆ.30 ರಂದು ನಗರದ ಕೊರಮಂಗಲದಲ್ಲಿರುವ ಫೋರಂ ಮಾಲ್ ನಲ್ಲಿ ರೇಡಿಯೋ ಮಿರ್ಚಿ ವತಿಯಿಂದ ಆಯೋಜಿಸಲಾಗಿದ್ದ ಪಾಕಿಸ್ತಾನಿ ಕಲಾವಿದರೊಬ್ಬರನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಗಡಿ ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿರುವ ಭಯೋತ್ಪಾದಕ ದಾಳಿಗೆ 18 ಯೋಧರು ಮೃತಪಟ್ಟಿದ್ದು, ಭಾರತ- ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಪಾಕ್ ಸಂಗೀತಕಾರ ಶಫ್ಕತ್ ಅಮಾನತ್ ಅಲಿ ಅವರನ್ನು ಕರೆಸಿ ರೇಡಿಯೋ ಮಿರ್ಚಿ ನಡೆಸಲಿದ್ದ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿ, ವಿಶ್ವಹಿಂದೂ ಪರಿಷತ್ ಈ ಬಗ್ಗೆ ಸಂಬಂಧಿಸಿದ ಠಾಣಾಧಿಕಾರಿಗೆ ಪತ್ರ ಬರೆದಿತ್ತು.

ಪಾಕ್ ಸಂಗೀತಕಾರ ಭಾಗವಹಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ, ಬೆಂಗಳೂರು ನಗರ ಪೊಲೀಸರಿಗೆ ದೂರನ್ನೂ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಫೋರಂ ಮಾಲ್, ಭಾರತ- ಪಾಕ್ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪಾಕ್ ಕಲಾವಿರಾರನ್ನು ಒಳಗೊಂಡ ಕಾರ್ಯಕ್ರಮವನ್ನು ನಡೆಸದಂತೆ ಈಗಾಗಲೇ ರೇಡಿಯೋ ಮಿರ್ಚಿಗೆ ಸೂಚನೆ ನೀಡಿರುವುದಾಗಿ ಆಡುಗೋಡಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಗೆ ಪತ್ರದ ಮೂಲಕ ತಿಳಿಸಿದೆ.  ಈ ಹಿನ್ನೆಲೆಯಲ್ಲಿ ಸೆ.30 ರಂದು ಫೋರಂ ಮಾಲ್ ನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದುಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com