ರಾಜ ಕಾಲುವೆ ಒತ್ತುವರಿ: ನಟ ದರ್ಶನ್, ಎಸ್.ಎಸ್ ಆಸ್ಪತ್ರೆಗೆ ನೋಟಿಸ್

ರಾಜಕಾಲುವೆ ಒತ್ತುವರಿ ಸಂಬಂಧ ನಟ ದರ್ಶನ್, ಹಾಗೂ ಎಸ್.ಎಸ್‌. ಆಸ್ಪತ್ರೆಯ ಮಾಲೀಕರು ಸೇರಿದಂತೆ ಒಟ್ಟು 69 ಆಸ್ತಿಗಳ ಮಾಲೀಕರಿಗೆ ಜಿಲ್ಲಾಡಳಿತವು ...
ದರ್ಶನ್
ದರ್ಶನ್

ಬೆಂಗಳೂರು: ರಾಜಕಾಲುವೆ ಒತ್ತುವರಿ ಸಂಬಂಧ ನಟ ದರ್ಶನ್, ಹಾಗೂ ಎಸ್.ಎಸ್‌. ಆಸ್ಪತ್ರೆಯ ಮಾಲೀಕರು ಸೇರಿದಂತೆ ಒಟ್ಟು 69 ಆಸ್ತಿಗಳ ಮಾಲೀಕರಿಗೆ ಜಿಲ್ಲಾಡಳಿತವು  ನೋಟಿಸ್‌ ಜಾರಿ ಮಾಡಿದೆ. ನೋಟಿಸ್‌ಗೆ ಉತ್ತರಿಸಲು ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸಲು ಅಕ್ಟೋಬರ್‌ 5ರವರೆಗೆ ಕಾಲಾವಕಾಶ ನೀಡಿದೆ.

ವಿಐಪಿ ಗಳಿಗೆ ಶಿಫಾರಸ್ಸು ಇರುವವರ ಮನೆಗೆ ಯಾವುದೇ ನೋಟಿಸ್ ನೀಡಿಲ್ಲ ಎಂಬ ಆರೋಪಕ್ಕೆ ಉತ್ತರ ನೀಡಿರುವ ಜಿಲ್ಲಾಡಳಿತ, ಐಡಿಯಲ್ಸ್ ಹೋಮ್ ನಲ್ಲಿರುವ ನಟ ದರ್ಶನ್ ಮನೆ ಸೇರಿದಂತೆ ಒಟ್ಟು 69 ಮಾಲೀಕರಿಗೆ ನೊಟೀಸ್ ನೀಡಲಾಗಿದೆ.

36 ಕಟ್ಟಡಗಳಿ ಹಾಗೂ 36 ಫ್ಲಾಟ್ ಮಾಲೀಕರಿಗೆ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅಕ್ಟೋಬರ್ 5 ರ ಒಳಗೆ ಈ ಎಲ್ಲಾ ಮಾಲೀಕರು ಬೆಂಗಳೂರು ದಕ್ಷಿಣ ತಹಶೀಲ್ದಾರ್ ಕಚೇರಿಗೆ ಹಾಜರಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಳೆದ ಸೆಪ್ಟಂಬರ್ ನಲ್ಲಿ ಬಿಬಿಎಂಪಿ  ಒತ್ತುವರಿ ಮಾಡಿಕೊಂಡಿದ್ದ 1,928 ಮನೆಗಳನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಿತ್ತು. ಮತ್ತೆ ತಮ್ಮ ಸರ್ವೆ ಮುಂದುವಿರಿಸಿದಾಗ ಮತ್ತಷ್ಟು ಒತ್ತುವರಿ ಮಾಡಿಕೊಂಡಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ತಿಳಿಸಿದ್ದಾರೆ.ನಟ ದರ್ಶನ್ ಸದ್ಯ ತಮ್ಮ ಮುಂದಿನ ಚಿತ್ರ ಚಕ್ರವರ್ತಿ ಶೂಟಿಂಗ್ ಗಾಗಿ ಮಲೇಶಿಯಾದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com