ತುಮಕೂರು ಕೇಂದ್ರ ಕಾರಾಗೃಹವು ಮಹಿಳಾ ಖೈದಿಗಳಿಗೆ ವರಮಾನ ಕೇಂದ್ರ!

ಜಾಮೀನು ಪಡೆಯಲು ಹಣವಿಲ್ಲದೇ ಜೈಲು ಶಿಕ್ಷೆ ಅನುಭವಿಸುತ್ತಿರುವ ತುಮಕೂರು ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಖೈದಿಗಳು ಸದ್ಯ ತಮ್ಮ ಜೀವನ...
ತುಮಕೂರು ಕೇಂದ್ರ ಕಾರಾಗೃಹ
ತುಮಕೂರು ಕೇಂದ್ರ ಕಾರಾಗೃಹ

ತುಮಕೂರು: ಜಾಮೀನು ಪಡೆಯಲು ಹಣವಿಲ್ಲದೇ ಜೈಲು ಶಿಕ್ಷೆ ಅನುಭವಿಸುತ್ತಿರುವ ತುಮಕೂರು ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಖೈದಿಗಳು ಸದ್ಯ ತಮ್ಮ  ಜೀವನ ನಿರ್ವಹಣೆಗಾಗಿ ಅಗತ್ಯವಿರುವ ಹಣ ಸಂಪಾದಿಸುತ್ತಿದ್ದಾರೆ,

2013ರ ಏಪ್ರಿಲ್ 23 ರಂದು ತುಮಕೂರು ಮಹಿಳಾ ಕೇಂದ್ರ ಕಾರಾಗೃಹವನ್ನು ಆರಂಭಿಸಲಾಯಿತು. ಆದರೆ ನಿಧಾನವಾಗಿ ಈ ಕಾರಾಗೃಹ ಮನೆಯಿಂದ ದೂರವಿರುವ ಖೈದಿಗಳಿಗೆ ಮನೆಯ ವಾತಾವರಣದಂತಾಗಿದೆ.

ಹೊರಗೆ ನಿರ್ಜನವಾಗಿ, ಸದ್ದು ಗದ್ದಲವಿಲ್ಲದಂತೆ ಕಾಣುವ ಜೈಲಿನ ಒಳಗಿರುವ ಖೈದಿಗಳು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರಾಗಿರುತ್ತಾರೆ. ಗಂಧದಕಡ್ಡಿ ಪ್ಯಾಕಿಂಗ್, ಸಿಹಿತಿಂಡಿ ತಯಾರಿಕೆ ಸೇರಿದಂತೆ ವಿವಿಧ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ಕೆಲ ಮಹಿಳೆಯರು ಜಾಮೀನಿಗಾಗಿ ಹಣ ಕೂಡಿಡುತ್ತಿದ್ದಾರೆ. ಹಲವರು ಭವಿಷ್ಯಕ್ಕಾಗಿ ತಮ್ಮ ಕೌಶಲ್ಯವನ್ನು ಬಳಸಿಕೊಳ್ಳುತ್ತಿದ್ದಾರೆ.

ಇದು ಸಾಧ್ಯವಾಗಲು ಕಾರಣ ತುಮಕೂರು ಕೇಂದ್ರ ಮಹಿಳಾ ಕಾರಾಗೃಹದ ಡಿಜಿ ಮತ್ತು ಐಜಿಪಿ ಎಚ್.ಎನ್ ಸತ್ಯನಾರಾಣರಾವ್ ಮತ್ತು ಸಹಾಯದ ಜೈಲು ಅಧೀಕ್ಷಕಿ ಆರ್ ಲತಾ. ಈ ಇಬ್ಬರು ಅಧಿಕಾರಿಗಳು ಸ್ವಯಂ ಸೇವಾ ಸಂಘಗಳನ್ನು ಸಂಪರ್ಕಿಸಿ, ಮಹಿಳಾ ಕೈದಿಗಳಿಗೆ ಕೆಲಸ ಒದಗಿಸಿಕೊಡುವ ಮೂಲಕ ಅವರು ಬದಲಾಗಲು ಕಾರಣಕರ್ತರಾಗಿದ್ದಾರೆ.

ಜೈಲಿನಿಂದ ಹೊರಗೆ ಹೋದ ನಂತರ ಅವರು ಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ನಿರ್ಹಹಿಸಲು, ಅನುಕೂಲವಾಗಲಿದೆ, ಜೈಲಿನಲ್ಲಿ ಮಹಿಳಾ ಕೈದಿಗಳು ಕ್ವಿಲ್ ಗರಿಯ ಆಭರಣ, ಪರಿಸರ ಸ್ನೇಹಿ ಬ್ಯಾಗ್ ಹೊಲಿಯುವುದು, ಸೋಲಾರ್ನಿಂದ ಹೊಲಿಗೆ ಯಂತ್ರ ಬಳಸಿ ಬಾಕ್ಸ್ ಗಳ ತಯಾರಿಕೆ ಮತ್ತು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ನಿರತರಾಗಿರುತ್ತಾರೆ.

2016 ರ ನವೆಂಬರ್ ನಲ್ಲಿ ಜೈಲು ಪ್ರಾಧಿಕಾರ ಮತ್ತು ಪ್ರಸಿದ್ಧ ಅಗರ ಬತ್ತಿ ಸಂಸ್ಥೆಯ ನಡುವೆ ಒಪ್ಪಂದ ನಡೆದಿದ್ದು, ಅದರಂತೆ ತುಮಕೂರು ಜೈಲಿನ ಮಹಿಳಾ ಖೈದಿಗಳಿಗೆ ಅಗರಬತ್ತಿ ಪ್ಯಾಕಿಂಗ್ ಕೆಲಸ ನೀಡಲಾಗಿದೆ. 50 ಡಜನ್ ಅಗರಬತ್ತಿ ಪ್ಯಾಕ್ ಮಾಡಿದರೇ, 55 ರು ಹಣ ನೀಡಲಾಗುತ್ತದೆ.

ನಾವು ಪರಿವರ್ತನೆಗೊಳ್ಳಲು ದೇವರು  ನಮಗೆ ಈ ರೀತಿಯ ಅವಕಾಶ ನೀಡಿರುವುದು ಸಂತಸ ತಂದಿದೆ. ಜೈಲಿನಂದ ಹೊರಹೋದ ಮೇಲೆ ನಾವು ನಮ್ಮ ಕಾಲ ಮೇಲೆ ನಾವು ನಿಂತು ಜೀವನ ಮಾಡುತ್ತೇವೆ ಎಂದು ಮಹಿಳಾ ಖೈದಿಗಳು ಹೇಳಿದ್ದಾರೆ.

ಕೇವಲ ಉದ್ಯೋಗ ಮಾತ್ರವಲ್ಲದೇ ಜೈಲಿನ ಅಧಿಕಾರಿಗಳು ಖೈದಿಗಳಿಗೆ ವಿಧ್ಯಾಭ್ಯಾಸದ ಅವಕಾಶ ಕೂಡ ಕಲ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com