ತುಮಕೂರು: ಕ್ರಮವಲ್ಲದ ಗರ್ಭಪಾತದಿಂದಾಗಿ ಗರ್ಭಿಣಿ ಸಾವು, ನರ್ಸ್ ನಾಪತ್ತೆ

ಕಳೆದ ವಾರ ಗರ್ಭಿಣಿ ರಾಧಾಮಣಿ ಸಾವಿಗೆ ಕ್ರಮವಲ್ಲದ ಗರ್ಭಪಾತ ಕಾರಣ ಎಂದು ಆರೋಗ್ಯ ಅಧಿಕಾರಿಗಳ ಜಂಟಿ ತನಿಖಾ ತಂಡ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತುಮಕೂರು: ಕಳೆದ ವಾರ ಗರ್ಭಿಣಿ ರಾಧಾಮಣಿ ಸಾವಿಗೆ ಕ್ರಮವಲ್ಲದ ಗರ್ಭಪಾತ ಕಾರಣ ಎಂದು ಆರೋಗ್ಯ ಅಧಿಕಾರಿಗಳ ಜಂಟಿ ತನಿಖಾ ತಂಡ ತಿಳಿಸಿದೆ.
ತುಮಕೂರಿನ 25 ವರ್ಷದ 4 ತಿಂಗಳ ಗರ್ಭಿಣಿ ರಾಧಾಮಣಿಗೆ ನರ್ಸ್ ಮಂಜುಳಾ ಎಂಬಾಕೆ ಗರ್ಭಪಾತ ಮಾಡಿಸಿದ್ದಳು, ಮೊದಲು ಗರ್ಭಪಾತವಾಗುವ ಮಾತ್ರೆ ನೀಡಿ ನಂತರ ಆಕೆಗೆ ಅಬಾರ್ಷನ್ ಮಾಡಿದ್ದಳು. ಆದರೆ ತಪ್ಪು ಕ್ರಮದಲ್ಲಿ ಗರ್ಭಪಾತ ಮಾಡಿದ್ದರಿಂದ ರಾಧಾಮಣಿ ಸಾವನ್ನಪ್ಪಿದ್ದಾರೆ ಎಂದು ತನಿಖಾ ವರದಿ ಹೇಳಿದೆ. ನರ್ಸ್ ಮಂಜುಳಾ, ಇಬ್ಬರು ವೈದ್ಯರು, ರಾಧಾಮಣಿ ಪತಿ ಮತ್ತು ಆಕೆಯ ನಾದಿನಿ ರಾಧಾಮಣಿ ಸಾವಿಗೆ ಕಾರಣ ಎಂದು ಹೇಳಲಾಗಿದೆ,
ರಾಧಾಮಣಿ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ, ನಾಲ್ಕನೇಯ ಮಗು ಗಂಡು ಮಗುಬೇಕೆಂದು ಬಯಸಿದ್ದ ರಾಧಾ ಪತಿ ಮಗುವಿನ ಲಿಂಗ ಪತ್ತೆ ಪರೀಕ್ಷೆ ಮಾಡಿಸಿದ್ದಾನೆ, 4ನೇಯದ್ದು ಹೆಣ್ಣು ಮಗು ಎಂದು ತಿಳಿದು ಬಂದಿದ್ದರಿಂದ ಗರ್ಭಪಾತಕ್ಕೆ ಮುಂದಾಗಿದ್ದಾರೆ. 
ಮಾರ್ಚ್ 21 ರಂದು ರಾಧಾಮಣಿಯನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಸುಜಾತಾ ಸಾಯಿಗಂಗಾ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಸ್ಯ್ಕಾನಿಂಗ್ ಮಾಡಿಸುವಂತೆ ಹೇಳಿದ್ದರು. ಮಾರ್ಚ್ 22 ರಂದು ರೇಡಿಯೋಲಾಜಿಸ್ಟ್ ಡಾ.ವಿಜಯ ರಾಘವೇಂದ್ರ ಸ್ಕ್ಯಾನಿಂಗ್ ಮಾಡಿದ್ದರು.
ಮಾರ್ಚ್ 24 ರಂದು ರಾಧಾಮಣಿ ಗರ್ಭಪಾತ ಮಾಡಿಸಲು ತನ್ನ ನಾದಿನಿ ಸುಧಾ ಜೊತೆ ನರ್ಸ್ ಮಂಜುಳಾ ಬಳಿ ತೆರಳಿದ್ದಾರೆ. ಈ ವೇಳೆ ತಪ್ಪು ಗರ್ಭಪಾತ ಮಾಡಿದ್ದರಿಂದ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ದಿನಗಳ ನಂತರ ರಾಧಾಮಣಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಇದರಲ್ಲಿ ಲಿಂಗ ಪತ್ತೆ ಪರೀಕ್ಷೆ ರಾಕೆಟ್ ಕೈವಾಡವಿರಬಹುದು. ಒಂದು ವೇಳೆ ಈ ಕಾನೂನು ಬಾಹಿರ ಗರ್ಭಪಾತ ಯಶಸ್ವಿಯಾಗಿದ್ದರೇ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ  ಡಾ. ರಂಗಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com