ರಾಜೀವ್ ಗಾಂಧಿ ಆರೋಗ್ಯ ವಿ.ವಿಯ ಹಲವು ಸೇವೆಗಳು ಇನ್ನು ಮುಂದೆ ಆನ್ ಲೈನ್ ನಲ್ಲಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಬೆಂಗಳೂರಿನಿಂದ...
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಬೆಂಗಳೂರಿನಿಂದ ರಾಮನಗರಕ್ಕೆ ವರ್ಗವಾಗಲಿರುವುದರ ಮಧ್ಯೆ, ವಿಶ್ವವಿದ್ಯಾಲಯದ ಅನೇಕ ಸೇವೆಗಳು ಆನ್ ಲೈನ್ ಗಳಾಗಿವೆ. ವಿದ್ಯಾರ್ಥಿಗಳಿಗೆ ಆಗುವ ತೊಂದರೆಯನ್ನು ಮತ್ತು ಮಧ್ಯಸ್ಥಿಕೆದಾರರ ಸಮಸ್ಯೆಗಳನ್ನು ತಪ್ಪಿಸಲು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
ಇದರ ಮೊದಲ ಹೆಜ್ಜೆಯಾಗಿ ಪರೀಕ್ಷಾ ಶುಲ್ಕ ಮತ್ತು ಸದಸ್ಯತ್ವ ಈ ವರ್ಷದಿಂದ ಆನ್ ಲೈನ್ ನಲ್ಲಿ ಆಗಿದೆ. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕೆ.ಎಸ್. ರವೀಂದ್ರನಾಥ್, ನಾವು ಆನ್ ಲೈನ್ ಮೂಲಕ ಹಣ ಪಾವತಿ ಮಾಡುವ ವಿಧಾನ ಅಳವಡಿಸುತ್ತಿದ್ದು ಅದು ವಿದ್ಯಾರ್ಥಿ ಮತ್ತು ಸಂಸ್ಥೆಗೆ ಅನುಕೂಲವಾಗಿರುತ್ತದೆ.
ವಿಶ್ವವಿದ್ಯಾಲಯದ ಹಣಕಾಸು ವಿಷಯಗಳು ಕೂಡ ಪಾರದರ್ಶಕವಾಗಿರುತ್ತದೆ. ಆನ್ ಲೈನ್ ಪಾವತಿ ವಿಧಾನವನ್ನು ಜಾರಿಗೆ ತಂದರೆ ಕಾಲೇಜುಗಳು ಸಂಗ್ರಹಿಸುವ ಶುಲ್ಕ ನೇರವಾಗಿ ವಿಶ್ವವಿದ್ಯಾಲಯದ  ಖಾತೆಗೆ ಜಮೆಯಾಗುತ್ತದೆ. 
ವಿಶ್ವವಿದ್ಯಾಲಯ ಈ ವರ್ಷದಿಂದ ಅರ್ಹತಾ ಪ್ರಮಾಣ ಪತ್ರವನ್ನು ಕೂಡ ಆನ್ ಲೈನ್ ನಲ್ಲಿ ನೀಡಲಿದೆ.ಕೇವಲ ಆಡಳಿತ ವಿಚಾರದಲ್ಲಿ ಮಾತ್ರವಲ್ಲದೆ ಮೌಲ್ಯಮಾಪನ ವಿಷಯದಲ್ಲಿಯೂ ವಿಶ್ವವಿದ್ಯಾಲಯ ಡಿಜಿಟಲೀಕರಣಗೊಳ್ಳಲಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಕ್ಸೆರಾಕ್ಸ್ ಪ್ರತಿಗೆ ಕಾಯಬೇಕಾಗಿಲ್ಲ.
ವಿವಿಯ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ.ಎಂ.ಕೆ.ರಮೇಶ್, ಇಲ್ಲಿಯವರೆಗೆ ನಾವು ಕೊರಿಯರ್ ಮೂಲಕ ಉತ್ತರ ಪತ್ರಿಕೆಗಳನ್ನು ಕಳುಹಿಸಬೇಕಾಗಿತ್ತು. ಇನ್ನು ಮುಂದೆ ವಿದ್ಯಾರ್ಥಿಗಳು ಉತ್ತರಲ ಪತ್ರಿಕೆಗಳ ನಕಲು ಪ್ರತಿಯನ್ನು ಇಮೇಲ್ ಮೂಲಕ ಪಡೆಯುತ್ತಾರೆ.
ಈ ಮುಂಚೆ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆ ಪಡೆಯಲು 10 ದಿನ ಕಾಯಬೇಕಾಗುತ್ತಿತ್ತು. ಇನ್ನು ಮುಂದೆ 24 ಗಂಟೆಗಳೊಳಗೆ ಸಿಗಲಿದೆ.
ವಿಶ್ವವಿದ್ಯಾಲಯದ ಕ್ಯಾಂಪಸ್ ವರ್ಗವಾಗುವುದರ ಕುರಿತು ಮಾತನಾಡಿದ ಉಪ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್, ಪ್ರಸ್ತುತ ಎಂಜಿನಿಯರಿಂಗ್ ವಿಭಾಗ ಮಾತ್ರ ರಾಮನಗರಕ್ಕೆ ವರ್ಗವಾಗುತ್ತದೆ. ಭೂಮಿ ವ್ಯಾಜ್ಯದಲ್ಲಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸರ್ಕಾರ ರಾಮನಗರದಲ್ಲಿ 216 ಎಕ್ರೆ ಪ್ರದೇಶವನ್ನು ನೀಡಿದೆ. ಅದರಲ್ಲಿ 145 ಎಕ್ರೆ ಹೆಲ್ತ್ ಸಿಟಿಗೆ ಮತ್ತು 71 ಎಕ್ರೆ ಆಡಳಿತ ವಿಭಾಗಕ್ಕೆ ಆಗಿದೆ. ಇವುಗಳಲ್ಲಿ 77 ಎಕ್ರೆ ಭೂಮಿ ವಿವಾದದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com