ಶಶಿಕಲಾ
ಶಶಿಕಲಾ

ಒಂದೇ ತಿಂಗಳಲ್ಲಿ 12 ಬಾರಿ ಎಐಎಡಿಎಂಕೆ ಮುಖಂಡರಿಂದ ಶಶಿಕಲಾ ಭೇಟಿ: ಕಾರಾಗೃಹ ನಿಯಮಗಳ ಬಗ್ಗೆ ಪ್ರಶ್ನೆ

ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಒಂದೇ ತಿಂಗಳಲ್ಲಿ 12 ಬಾರಿ ತಮ್ಮ ಪಕ್ಷದ ಮುಖಂಡರನ್ನು...
Published on
ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಒಂದೇ ತಿಂಗಳಲ್ಲಿ 12 ಬಾರಿ ತಮ್ಮ ಪಕ್ಷದ ಮುಖಂಡರನ್ನು ಭೇಟಿಯಾಗಿದ್ದಾರೆ. ಶಶಿಕಲಾ ಜೈಲಿನ ನಿಯಮಗಳನ್ನು ಉಲ್ಲಂಘಿಸಿದ್ದು, ಕಾರಾಗೃಹ ನೀತಿ ನಿಯಮಗಳ ಬಗ್ಗೆ ಪ್ರಶ್ನಿಸುವಂತಾಗಿದೆ.
ಮಾಹಿತಿ ಹಕ್ಕು ನಿಯಮದಡಿ ಆರ್ ಟಿ ಐ ಕಾರ್ಯಕ್ತ ನರಸಿಂಹ ಮೂರ್ತಿ ಅರ್ಜಿಗೆ ಉತ್ತರಿಸಿರುವ ಕೇಂದ್ರ ಕಾರಾಗೃಹ, ಫೆಬ್ರವರಿ 16 ರಿಂದ ಮಾರ್ಚ್ 18 ರವರೆಗಿನ ಶಶಿಕಲಾ ಭೇಟಿಯ ವಿವರ ನೀಡಿದೆ.
ಶಶಿಕಲಾ ಜೊತೆ ಜೈಲುವಾಸ ಅನುಭವಿಸುತ್ತಿರುವ ಇಳವರಸಿ ಮತ್ತು ಸುಧಾಕರನ್ 4 ಬಾರಿ ಮಾತ್ರ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದಾರೆ. ಆದರೆ ಶಶಿಕಲಾ 12 ಬಾರಿ ಭೇಟಿಯಾಗಿದ್ದಾರೆ.
ವಕೀಲರು, ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್, ಮತ್ತು ವಿವೇಕ್, ಲೋಕಸಭಾ ಡೆಪ್ಯುಟಿ ಸ್ಪೀಕರ್ ತಂಬಿದೊರೈ ಶಶಿಕಲಾ ಅವರನ್ನು ಭೇಟಿ ಮಾಡಿರುವ ಪ್ರಮುಖರಲ್ಲಿದ್ದಾರೆ.
ಶಶಿಕಲಾ ಅವರನ್ನು ದಿನಕರನ್ ಫೆಬ್ರವರಿ 20 ಹಾಗೂ ಮಾರ್ಚ್ 8 ರಂದು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ,
ವಿಚಾರಣಾಧೀನ ಕೈದಿಗಳನ್ನು ಅವರ ಸಂಬಂಧಿಕರು ಭೇಟಿ ಮಾಡಲು 15 ದಿನಗಳಿಗೊಮ್ಮೆ ಮಾತ್ರ ಅವಕಾಶವಿರುತ್ತದೆ, ಆದರೆ ಶಶಿಕಲಾ ವಿಚಾರದಲ್ಲಿ ಜೈಲಿನ ನಿಯಮಗಳನ್ನು ಮುರಿಯಲಾಗಿದೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com