ಚಿನ್ನದ ಪದಕಗಳಿಗೆ 17 ಲಕ್ಷ ರೂಪಾಯಿ ಖರ್ಚು ಮಾಡಿದ ವಿಶ್ವವಿದ್ಯಾಲಯ

ವಾರ್ಷಿಕ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಚಿನ್ನದ...
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘಟಿಕೋತ್ಸವ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘಟಿಕೋತ್ಸವ
ಬೆಂಗಳೂರು: ವಾರ್ಷಿಕ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಚಿನ್ನದ ಕವಚವಿರುವ ಪದಕಗಳು ಸಾಮಾನ್ಯವಾಗಿ ನೀಡಲಾಗುತ್ತದೆ. ಆದರೆ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ(ಆರ್ ಜಿಯುಎಚ್ಎಸ್) ಈ ಬಾರಿ 19ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು, ನರ್ಸಿಂಗ್ ಮತ್ತು ಡಿಪ್ಲೊಮಾ ಕೋರ್ಸ್ ವಿದ್ಯಾರ್ಥಿಗಳಿಗೆ 103 ನಿಜವಾದ ಚಿನ್ನದ ಪದಕಗಳನ್ನು ಕೊಟ್ಟಿದೆ.
ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳುವ ಪ್ರಕಾರ ಒಟ್ಟು 17 ಲಕ್ಷ ರೂಪಾಯಿಗಳನ್ನು ಚಿನ್ನದ ಪದಕಗಳಿಗಾಗಿ ಖರ್ಚು ಮಾಡಲಾಗಿದೆಯಂತೆ. ವಿಶ್ವವಿದ್ಯಾಲಯ 10 ಲಕ್ಷ ರೂಪಾಯಿ ಭರಿಸಿದರೆ ಉಳಿದ 7 ಲಕ್ಷ ರೂಪಾಯಿ ದತ್ತಿ ನಿಧಿಗಳಿಂದ ಸಿಕ್ಕಿದೆ. ಪ್ರತಿ ಪದಕ 5 ಗ್ರಾಂ ತೂಕ ಹೊಂದಿದ್ದು ಸುಮಾರು 16,000 ಬೆಲೆ ಬಾಳುವದ್ದಾಗಿದೆ.
ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಎಸ್. ರವೀಂದ್ರನಾಥ್, ದತ್ತಿನಿಧಿ ಸಾಕಷ್ಟು ಬರುವುದಿಲ್ಲ ಎಂಬ ಕಾರಣಕ್ಕೆ ನಾವು ವಿದ್ಯಾರ್ಥಿಗಳನ್ನು ಬೇಸರಪಡಿಸಲು ಬಯಸುವುದಿಲ್ಲ. ದತ್ತಿ ಹಣ ಸಾಕಾಗದಿದ್ದರೆ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಬಹುದು ಎಂಬ ಕಾನೂನು ಇದೆ. ದಾನಿಗಳಿಂದ ದತ್ತಿನಿಧಿಯನ್ನು 50,000ಗಳಿಂದ 5 ಲಕ್ಷಕ್ಕೆ ಹೆಚ್ಚಿಸಲು ಕೋರಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com