ಗಿಡ ನೆಡುವ ಮೂಲಕ ಮಗಳ ಜನ್ಮದಿನ ಆಚರಿಸುವ ಆದರ್ಶ ಪೋಷಕರು

6 ವರ್ಷದ ಹರಿಣಿ ಸ್ವಾಮಿನಾಥನ್ ಅವರ ಪೋಷಕರು ಮಾತ್ರ ತಮ್ಮ ಮಗಳ ಜನ್ಮದಿನವನ್ನು ಕಳೆದ 6 ವರ್ಷಗಳಿಂದ ಗಿಡಗಳನ್ನು ನೆಡುವ ಮೂಲಕ ವಿನೂತನವಾಗಿ ಆಚರಣೆ ಮಾಡುತ್ತಿದ್ದಾರೆ.
ತಂದೆಯೊಂದಿಗೆ ಹರಿಣಿ ಸ್ವಾಮಿನಾಥನ್
ತಂದೆಯೊಂದಿಗೆ ಹರಿಣಿ ಸ್ವಾಮಿನಾಥನ್
Updated on
ಬೆಂಗಳೂರು: ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಬೆಂಬಳೂರಿನಲ್ಲಿರುವ 6 ವರ್ಷದ ಹರಿಣಿ ಸ್ವಾಮಿನಾಥನ್ ಅವರ ಪೋಷಕರು ಮಾತ್ರ ತಮ್ಮ ಮಗಳ ಜನ್ಮದಿನವನ್ನು ಕಳೆದ 6 ವರ್ಷಗಳಿಂದ ಗಿಡಗಳನ್ನು ನೆಡುವ ಮೂಲಕ ವಿನೂತನವಾಗಿ ಆಚರಣೆ ಮಾಡುತ್ತಿದ್ದಾರೆ. 
ಎಂಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುವ ಸ್ವಾಮಿನಾಥನ್ ಅವರು ತಮ್ಮ ಮಗಳ ಪ್ರತಿ ವರ್ಷದ ಜನ್ಮದಿನದ ಆಚರಣೆಯಲ್ಲೂ 111 ಗಿಡ ನೆಡುತ್ತಾರೆ. 2012 ರಿಂದ ಅಂದರೆ ತಮ್ಮ ಮಗಳಿಗೆ 2 ವರ್ಷ ತುಂಬಿದಾಗಿನಿಂದ ಸ್ವಾಮಿನಾಥನ್ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಹವ್ಯಾಸ ಹೊಂದಿದ್ದಾರೆ. 
ಗುರು ಮಹತ್ರಿಯ ರಾ ಅವರ ಉಪನ್ಯಾಸ ಕೇಳಿದಾಗಿನಿಂದ 11 ಸಂಖ್ಯೆಯ ಮಹತ್ವದ ಬಗ್ಗೆ ಆಕರ್ಷಿತರಾಗಿರುವ ಸ್ವಾಮಿನಾಥನ್ ಪ್ರತಿ ವರ್ಷವೂ 111 ಗಿಡಗಳನ್ನು ನೆಡುವ ಸಂಕಲ್ಪ ಮಾಡಿದರಂತೆ. ಹರಿಣಿಯ ಮೊದಲ ಜನ್ಮದಿನವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದೆವು. ಆ ನಂತರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು 2005 ರಲ್ಲಿ ಚೆನ್ನೈ ನಿಂದ ಬೆಂಗಳೂರಿಗೆ ಬಂದು ವಾಸಿಸುತ್ತಿರುವ ಸ್ವಾಮಿನಾಥನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com