ಆದರೆ ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ, ಸರ್ಕಾರ ಶುಲ್ಕ ನಿಗದಿಪಡಿಸಿದರೂ ಈ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬರುವುದಿಲ್ಲ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಈಗಾಗಲೇ ಹಲವು ಶಾಲೆಗಳು ಶುಲ್ಕ ನಿಗದಿಪಡಿಸಿರುವುದರಿಂದ ಮತ್ತು ಕೆಲವು ಶಾಲೆಗಳು ಈಗಾಗಲೇ ಶುಲ್ಕ ಸಂಗ್ರಹಿಸಿರುವುದರಿಂದ ಈ ವರ್ಷವೇ ಶುಲ್ಕ ನಿಯಮ ಜಾರಿಗೆ ಬಂದರೂ ಅದರಿಂದ ಪ್ರಯೋಜನವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.