ವೈದ್ಯಕೀಯ ಶಿಕ್ಷಣ: ಎನ್ಆರ್ ಐ, ಮ್ಯಾನೇಜ್ ಮೆಂಟ್ ಕೋಟಾಗಳಿಗೆ ಈ ವರ್ಷದಿಂದ ಸಾಮಾನ್ಯ ಕೌನ್ಸೆಲಿಂಗ್

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅನಿವಾಸಿ ಭಾರತೀಯರ ಮತ್ತು ಮ್ಯಾನೇಜ್ ಮೆಂಟ್ ಕೋಟಾಗಳಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅನಿವಾಸಿ ಭಾರತೀಯರ ಮತ್ತು ಮ್ಯಾನೇಜ್ ಮೆಂಟ್ ಕೋಟಾಗಳಡಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಒಂದೇ ಕೌನ್ಸೆಲಿಂಗ್ ಆಗಿರುತ್ತದೆ.ಕೌನ್ಸೆಲಿಂಗ್ ನಲ್ಲಿ ಮರು ದಾಖಲಾತಿಗೆ ಅಭ್ಯರ್ಥಿಗಳಿಗೆ 4-5  ದಿನಗಳ ಹೆಚ್ಚುವರಿ ಸಮಯವನ್ನು ಸರ್ಕಾರ ನೀಡಲಿದೆ.
 ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ಈ ಸೀಟುಗಳಿಗೆ ಶುಲ್ಕವನ್ನು ಸಂಸ್ಥೆಗಳು ನಿಗದಿಪಡಿಸಲಿದ್ದು ಸೀಟುಗಳ ಹಂಚಿಕೆಯನ್ನು ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ನೀಡಲಿದೆ ಎಂದು ಹೇಳಿದರು.
ನಿನ್ನೆ ಖಾಸಗಿ ಕಾಲೇಜುಗಳ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದ ಶರಣ್ ಪ್ರಕಾಶ್ ಪಾಟೀಲ್ ಸಾಮಾನ್ಯ ಕೌನ್ಸೆಲಿಂಗ್ ಬಗ್ಗೆ ಚರ್ಚೆ ನಡೆಸಿದರು. ಅದರಲ್ಲಿ ಕೆಲವು ಸಂಸ್ಥೆಗಳ ಪ್ರತಿನಿಧಿಗಳು ಅಧಿಸೂಚನೆಯನ್ನು ನೀಡಿ ಸರ್ಕಾರದ ಅಧೀನದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಬಗ್ಗೆ ಮತ್ತಷ್ಟು ತಿದ್ದುಪಡಿಗಳನ್ನು ತರಬೇಕೆಂದು ಕೋರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com