ಏಪ್ರಿಲ್ 17 ರಂದು ನಡೆಯಬೇಕಿದ್ದ ಕೆಂಪೇಗೌಡ ಜಯಂತಿ ಮುಂಡೂಡಿದ ರಾಜ್ಯ ಸರ್ಕಾರ

ಏಪ್ರಿಲ್ 17 ರಂದು ನಡೆಸಲು ಉದ್ದೇಶಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಕಾರ್ಯಕ್ರಮಕ್ಕೆ ಇನ್ನು ಎರಡು ದಿನ ...
ನಾಡಪ್ರಭು ಕೆಂಪೇಗೌಡ
ನಾಡಪ್ರಭು ಕೆಂಪೇಗೌಡ
ಬೆಂಗಳೂರು: ಏಪ್ರಿಲ್ 17 ರಂದು ನಡೆಸಲು ಉದ್ದೇಶಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಕಾರ್ಯಕ್ರಮಕ್ಕೆ ಇನ್ನು ಎರಡು ದಿನ ಬಾಕಿಯಿರುವ ವೇಳೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಏಪ್ರಿಲ್‌ 17 ರಂದು ವಿಧಾನಸೌಧದಲ್ಲಿ ಜಯಂತಿ ನಡೆಸಲು ಸರ್ಕಾರ ಸಿದ್ಧತೆ ನಡೆಸಿತ್ತು, ಆದರೆ  ಅನೇಕರು ತಕರಾರು ಮಾಡಿದ್ದರಿಂದ ಆ ದಿನ ಆಚರಣೆ ಬೇಡ ಎಂದು ಆದಿಚುಂಚನಗಿರಿ ಮಠದ ನಿರ್ಮಾಲಾನಂದ ಸ್ವಾಮೀಜಿ ತಿಳಿಸಿದರು. ಹೀಗಾಗಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ದಾಖಲೆಗಳು ಮತ್ತು ಇತಿಹಾಸ ತಜ್ಞಪರನ್ನು ಸಂಪರ್ಕಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಏಪ್ರಿಲ್ 17ರಂದು ಕೆಂಪೇಗೌಡ ಜಯಂತಿ ಆಚರಿಸಲು ದಿನಾಂಕ ನಿಗದಿ ಮಾಡಿದ್ದರು. 
ಜಯಂತಿ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆಹ್ವಾನ ಪತ್ರಿಕೆಯೂ ಮುದ್ರಣಗೊಂಡಿತ್ತು. ಯಾರಿಗೂ ಅಸಮಾಧಾನ ಆಗಬಾರದೆಂದು ಜಯಂತಿ ರದ್ದುಪಡಿಸಿದ್ದೇವೆ ಎಂದು ಹೇಳಿದ್ದಾರೆ.
ಆದಿಚುಂಚನಗಿರಿ ಮಠಾಧೀಶ ನಿರ್ಮಾಲಾನಂದ ಸ್ವಾಮೀಜಿ, ಸಂಶೋಧಕರು ಮತ್ತು ತಜ್ಞರು ಕೆಂಪೇಗೌಡರ ಹುಟ್ಟಿದ ದಿನದ ಬಗ್ಗೆ ಪರಿಶೀಲಿಸಿ ಒಮ್ಮತದಿಂದ ಹೊಸ ದಿನಾಂಕವನ್ನು ಸೂಚಿಸಿದ್ದಾರೆ ಜೂನ್ 27 ರಂದು ಸರ್ಕಾರದಿಂದ ಕೆಂಪೇಗೌಡ ಜಯಂತಿ ಆಚರಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com