ನಮ್ಮ ಮೆಟ್ರೋ-1ನೇ ಹಂತ ಮೇ ಅಂತ್ಯಕ್ಕೆ ಪೂರ್ಣ: ಅಧಿಕಾರಿಗಳ ವಿಶ್ವಾಸ

ನಮ್ಮ ಮೆಟ್ರೋದ ಮೊದಲ ಹಂತದ ಕಾಮಗಾರಿ ಮುಗಿದು ಮೇ ಕೊನೆಯ ವೇಳೆಗೆ ಕಾರ್ಯಾರಂಭ...
ನಮ್ಮ ಮೆಟ್ರೊ
ನಮ್ಮ ಮೆಟ್ರೊ
ಬೆಂಗಳೂರು: ನಮ್ಮ ಮೆಟ್ರೋದ ಮೊದಲ ಹಂತದ ಕಾಮಗಾರಿ ಮುಗಿದು ಮೇ ಕೊನೆಯ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.ರೈಲ್ವೆ ಸುರಕ್ಷತಾ ಆಯುಕ್ತರನ್ನು ಉತ್ತರ-ದಕ್ಷಿಣ  ಕಾರಿಡಾರಿನ ಉಳಿದ ಕಾಮಗಾರಿಗಳ ತಪಾಸಣೆಗೆ ಆಹ್ವಾನಿಸುವ ಸಾಧ್ಯತೆಯಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಪರೀಕ್ಷೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿದ್ದು ನಮಗೆ ಉತ್ತಮ ಫಲಿತಾಂಶ ದೊರಕುತ್ತಿದೆ. ಹೈಸ್ಪೀಡ್ ಪರೀಕ್ಷೆಯನ್ನು ನಡೆಸಲು ಸಾಧ್ಯತೆಯಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೀಣ್ಯ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸುತ್ತಿರುವುದರಿಂದ ರಾತ್ರಿ ವೇಳೆ ಮಾತ್ರ ತಪಾಸಣೆ ನಡೆಸಲು ಸಾಧ್ಯ. ರೈಲ್ವೆ ಸುರಕ್ಷತೆಯ ಆಯುಕ್ತರನ್ನು ಈ ವಾರದ ಅಂತ್ಯದಲ್ಲಿ ತಪಾಸಣೆಗೆ ಕರೆಯಲಾಗುವುದು. ಮೇ ಕೊನೆಯ ಹೊತ್ತಿಗೆ ಸಾರ್ವಜನಿಕ ಸೇವೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಮೈಸೂರು ರಸ್ತೆಯಿಂದ ಭೈಯಪ್ಪನಹಳ್ಳಿ ಮಾರ್ಗವಾಗಿ ಪೂರ್ವ-ಪಶ್ಚಿಮ ಕಾರಿಡಾರ್ ಕೆಲ ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಉತ್ತರ-ದಕ್ಷಿಣ ಕಾರಿಡಾರ್ ಮುಖ್ಯ ಸಮಸ್ಯೆಯಾಗಿದೆ. ಮಂತ್ರಿ ಸ್ಕ್ವಾರ್ ಸಂಪಿಗೆ ರಸ್ತೆಯಿಂದ ನಾಗಸಂದ್ರದವರೆಗೆ ಭಾಗಶಃ ಕಾರ್ಯನಿರ್ವಹಿಸುತ್ತದೆ. ಆದರೆ ಚಿಕ್ಕಪೇಟೆಯಿಂದ ಪುಟ್ಟೇನಹಳ್ಳಿ ಇನ್ನು ಆರಂಭವಾಗಬೇಕಿದೆ.
ಉತ್ತರ-ದಕ್ಷಿಣ ಕಾರಿಡಾರ್ 24.2 ಕಿಲೋ ಮೀಟರ್ ದೂರ ಕ್ರಮಿಸಲಿದ್ದು ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಕಳೆದ ವರ್ಷ ನವೆಂಬರ್ ನಲ್ಲಿ ನಮ್ಮ ಮೆಟ್ರೊ ನ್ಯಾಶನಲ್ ಕಾಲೇಜಿನಿಂದ ಯೆಲಚೆನಹಳ್ಳಿಯವರೆಗೆ ಎತ್ತರಿಸಿದ ಕಾರಿಡಾರ್ ನಲ್ಲಿ ಪ್ರಾಯೋಗಿಕ ಓಡಾಟವನ್ನು ಆರಂಭಿಸಿತ್ತು. ಈ ವರ್ಷ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ಅಂಡರ್ ಗ್ರೌಂಡ್ ವಿಭಾಗದಲ್ಲಿ ಕೆಲಸ ಆರಂಭಿಸಿ ಮಾರ್ಚ್ 30ರ ವೇಳೆಗೆ ಪ್ರಾಯೋಗಿಕ ಓಡಾಟ ಆರಂಭಿಸಿತು.
ನಮ್ಮ ಮೆಟ್ರೋದ ಮೊದಲ ಹಂತ ಏಪ್ರಿಲ್-ಮೇ ಹೊತ್ತಿಗೆ ಕಾರ್ಯಾರಂಭ ಮಾಡುವುದು ಎಂದು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದರು. ಮೊದಲ ಹಂತದ ಕಾಮಗಾರಿಗೆ ಸುಮಾರು 2,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಂದಾಜಿಸಿದ್ದು ಇಂದು 13,805 ಕೋಟಿ ರೂಪಾಯಿ ತಗುಲಿದೆ. 2012ರಲ್ಲಿ ಮುಗಿಸಬೇಕೆಂದು ಅಂದಾಜಿಸಿದ್ದ ಮೊದಲ ಹಂತದ ಕಾಮಗಾರಿ 2017ಕ್ಕೆ ಬಂದು ನಿಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com