ಬೆಳ್ಳಂದೂರಿನಲ್ಲಿ ಮತ್ತೆ ಉಕ್ಕಿ ಹರಿಯುತ್ತಿರುವ ನೊರೆ: ನಿವಾಸಿಗಳಿಗೆ ಸಂಕಟ

ಬೆಳ್ಳಂದೂರು ಕೆರೆಯ ಸುತ್ತಮುತ್ತಲ ನಿವಾಸಿಗಳಿಗೆ ಸಮಸ್ಯೆಯಿಂದ ಬಿಡುಗಡೆಯಿಲ್ಲ ಎಂದು...
ಬೆಳ್ಳಂದೂರು ಕೆರೆಗೆ ನಿನ್ನೆ ಬಿದ್ದು ಮೃತಪಟ್ಟ ಹಸು
ಬೆಳ್ಳಂದೂರು ಕೆರೆಗೆ ನಿನ್ನೆ ಬಿದ್ದು ಮೃತಪಟ್ಟ ಹಸು
ಬೆಂಗಳೂರು: ಬೆಳ್ಳಂದೂರು ಕೆರೆಯ ಸುತ್ತಮುತ್ತಲ ನಿವಾಸಿಗಳಿಗೆ ಸಮಸ್ಯೆಯಿಂದ ಬಿಡುಗಡೆಯಿಲ್ಲ ಎಂದು ಕಾಣುತ್ತದೆ. ಕೆರೆಯಲ್ಲಿ ಮತ್ತೆ ನೊರೆ ಉಕ್ಕುತ್ತಿದ್ದು ಕಳೆದ ಎರಡು ದಿನಗಳಿಂದ ಮಳೆ ಬರುತ್ತಿರುವುದರಿಂದ ನೊರೆಗಳು ರಸ್ತೆಯ ಮೇಲೆ ಹರಿಯುತ್ತಿವೆ. ನೊರೆಯಿಂದಾಗಿ ರಸ್ತೆಯಲ್ಲಿ ಹೋಗುವ ದ್ವಿಚಕ್ರ ವಾಹನ ಸವಾರರಿಗೆ ಕಷ್ಟವಾಗಿದೆ. ಗಾಳಿ ಹೇಗೆ ನೊರೆಯನ್ನು ರಸ್ತೆಗೆ ಎಳೆದುಕೊಂಡು ಹೋಗುತ್ತಿದೆ ಎಂದು ನಿನ್ನೆಯಿಂದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಕೆರೆಯಲ್ಲಿ ಇತ್ತೀಚೆಗೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕಾರ ಮಧ್ಯಪ್ರವೇಶಿಸಿದರೂ ಕೂಡ ಅಧಿಕಾರಿಗಳು ಯಾವುದೇ ಸರಿಯಾದ ಕ್ರಮ ಇದುವರೆಗೆ ಕೈಗೊಂಡಿಲ್ಲ.ಕಾರ್ಯಯೋಜನೆಯೊಂದನ್ನು ಸಿದ್ದಪಡಿಸಿದ್ದು ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಕೆರೆಯಿಂದ ಅವ್ಯಾಹತವಾಗಿ ನೊರೆ ಉಕ್ಕಿ ಹರಿಯುತ್ತಿರುವುದರಿಂದ ನಮಗೆ ತೀವ್ರ ತೊಂದರೆಯಾಗುತ್ತಿದ್ದು ಕೆಟ್ಟ ವಾಸನೆ ಕೂಡ ಬರುತ್ತಿದೆ. ರಸ್ತೆ ಮೇಲೆಲ್ಲಾ ನೊರೆ ಬಿದ್ದಿದೆ ಎನ್ನುತ್ತಾರೆ ಹತ್ತಿರದ ನಿವಾಸಿ ಸೊನಾಲಿ ಸಿಂಗ್.
ಮೊನ್ನೆ 12ರಂದು ರಾಷ್ಟ್ರೀಯ ಹಸಿರು ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಸಂಸ್ಕರಿಸದ ಚರಂಡಿ ನೀರನ್ನು ಬಿಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತ್ತು. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೂಡ ಎಚ್ಚರಿಕೆ ನೀಡಿದ ಹಸಿರು ಪ್ರಾಧಿಕಾರ ಕೆರೆಯ ನೀರಿನ ಸ್ವಚ್ಛತೆ ಕಾಪಾಡುವಂತೆ ಹೇಳಿತ್ತು.
ಹತ್ತಿರದ ಅಪಾರ್ಟ್ ಮೆಂಟ್, ಕೈಗಾರಿಕೆಗಳಿಂದ ಸಂಸ್ಕರಿಸದ ನೀರು ಕಳೆದ 5 ವರ್ಷಗಳಿಂದ ಕೆರೆಗೆ ಹರಿದು ಬರುತ್ತಿರುವುದರಿಂದ ಕೆರೆಯ ನೀರು ಸಂಪೂರ್ಣ ಹಾನಿಯಾಗಿದೆ. ಹೆಚ್ ಎಎಲ್, ದೊಮ್ಮಲೂರು, ಕೋರಮಂಗಲ ಮತ್ತು ಅಗರ ಪ್ರದೇಶಗಳಿಂದ ಕೆರೆಗೆ ಕೊಳಕು ನೀರು ಒಂದೇ ಸಮನೆ ಹರಿದು ಬರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com