ಸದ್ಯದಲ್ಲಿಯೇ ಸರ್ಕಾರದಿಂದ ಹಿರಿಯ ನಾಗರಿಕರಿಗೆ 'ಯಾತ್ರಾ ಭಾಗ್ಯ'

2018ರ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗಲೇ...
ಶೃಂಗೇರಿ
ಶೃಂಗೇರಿ
ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗಲೇ ತನ್ನ  ಅಹಿಂದ ಇಮೇಜ್ ನಿಂದ ಹೊರಬಂದು ಹೆಚ್ಚಿನ ಮತದಾರರನ್ನು ಸೆಳೆಯಲು ಸಿದ್ದರಾಮಯ್ಯ ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆ ಹಿರಿಯ ನಾಗರಿಕರಿಗೆ ಯಾತ್ರಾ ಪ್ರವಾಸ ಪ್ಯಾಕೇಜ್ ನ ಅಂತಿಮ ತಯಾರಿ ನಡೆಸುತ್ತಿದೆ. ಈ ಮೂಲಕ ಬಿಜೆಪಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.
ಉದ್ದೇಸಿತ ಪ್ರವಾಸ ವಿಸ್ತಾರವಾದ ಪ್ಯಾಕೇಜ್ ನ್ನು ಒಳಗೊಂಡಿದ್ದು ಪ್ರವಾಸ, ದರ್ಶನ, ವಸತಿ, ಊಟ ಮತ್ತು ಮಾರ್ಗದರ್ಶನದ ವ್ಯವಸ್ಥೆಯನ್ನು ನೀಡುತ್ತದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಯಾತ್ರಾ ಪ್ರವಾಸದ ಪ್ಯಾಕೇಜ್ ಇದಾಗಿದ್ದು ಉತ್ತಮ ಪ್ರಯತ್ನವಾಗಿದೆ. ನಾವು 22 ಯಾತ್ರಾ ಸ್ಥಳಗಳನ್ನು ಗುರುತಿಸಿದ್ದು ಮುಂದಿನ ಕೆಲ ವಾರಗಳಲ್ಲಿ ಪ್ರವಾಸ ಆರಂಭವಾಗಲಿದೆ. ಯಾತ್ರೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಹೇಳಿದರು.
ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶ್ರವಣಬೆಳಗೊಳ, ಕೂಡಲಸಂಗಮ, ಶೃಂಗೇರಿ, ಮಲೆ ಮಹದೇಶ್ವರ ಮತ್ತು ಬಂಡೆ ನವಾಜ್ ದರ್ಗಾ ಇತ್ಯಾದಿ ಸ್ಥಳಗಳಿಗೆ ಹಿರಿಯ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ. 
ಎಲ್ಲಾ ಧರ್ಮದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com