ಮಳೆಯಿಂದಾಗಿ ಬಂಡಿಪುರ, ನಾಗರಹೊಳೆ ಅಭಯಾರಣ್ಯಗಳಲ್ಲಿ ನೆಮ್ಮದಿ

ಬಂಡಿಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಅರಣ್ಯಾಧಿಕಾರಿಗಳು ಕೊಂಚ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಬಂಡಿಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಅರಣ್ಯಾಧಿಕಾರಿಗಳು ಕೊಂಚ ನಿರಾಳವಾಗಿದ್ದಾರೆ.
ಮಳೆಯಿಲ್ಲದೇ ಉಂಟಾಗಿದ್ದ ಬರ ಪರಿಸ್ಥಿತಿಯಿಂದಾಗಿ ಪಶ್ಚಿಮ ಘಾಟ್ ಗಳಲ್ಲಿ ಕಳೆದ ತಿಂಗಳು ಕಾಡ್ಗಿಚ್ಚಿಗೆ ಹಲವು ಎಕರೆ ಕಾಡು ಆಹುತಿಯಾಗಿತ್ತು. ಮೈಸೂರು, ಕೊಡಗು ಮತ್ತು ನಾಗರಹೊಳೆ ಕಾಡುಗಳಲ್ಲಿ ಮಳೆಯಾಗಿರುವುದರಿಂದ ಕಾಡು ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಹುಡುಕಾಡಿ ಮನುಷ್ಯ ವಾಸಿಸುವ ಸ್ಥಳಕ್ಕೆ ಬರುವುದು ಇದರಿಂದ ಕಡಿಮೆಯಾಗಿದೆ. ಕಬಿನಿ ಹಿನ್ನೀರು ಪ್ರದೇಶದಲ್ಲಿ ಕೂಡ ಕಳೆದ ಎರಡು ವಾರಗಳಲ್ಲಿ ಮೂರು ಬಾರಿ ಉತ್ತಮ ಮಳೆಯಾಗಿದೆ.
ಕಬಿನಿಹಿನ್ನೀರು ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಹಳ್ಳಗಳು, ಮತ್ತು ಕೆರೆಗಳು ತುಂಬಿವೆ. ಇದರಿಂದಾಗಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ, ಕಲುಷಿತ ನೀರು ಕುಡಿದು ಆನೆಗಳು ಸಾವನ್ನಪ್ಪಿದ ಘಟನೆ ಕೂಡ ವರದಿಯಾಗಿತ್ತು,
ಕಬಿನಿ ಹಿನ್ನೀರು ಪ್ರದೇಶದಲ್ಲಿ ಮಳೆಯಾಗಿದೆ, ಆದರೆ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗಿಲ್ಲ, ಕೇರಳದಲ್ಲಿ ಉತ್ತಮ ಮಳೆಯಾದರೇ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ ಎಂದು ಸ್ಲೂಸ್ ಗೇಟ್ ಆಪರೇಟರ್ ನಾಗರಾಜ್ ಹೇಳಿದ್ದಾರೆ.
ಬಂಡಿಪುರ ಅಭಯಾರಣ್ಯ, ರಂಗನ ತಿಟ್ಟು ವನ್ಯಜೀವಿ ಧಾಮದಲ್ಲೂ ಉತ್ತಮ ಮಳೆಯಾಗಿದೆ, ಆದರೆ ಬಿಳಿಗಿರ ರಂಗನ ಬೆಟ್ಟ ಮತ್ತು ಮಲೈ ಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಮಳೆಯಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com