ಬಿಡಬ್ಲ್ಯೂಎಸ್ಎಸ್ ಬಿ ಪೈಪ್ ಲೈನ್ ಕಾಮಗಾರಿ: ಬನ್ನೇರುಘಟ್ಟ, ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ

ಬೆಂಗಳೂರು ಜಲಮಂಡಳಿ (ಬಿಡಬ್ಲ್ಯೂಎಸ್ಎಸ್ ಬಿ) ನಡೆಸುತ್ತಿರುವ ಪೈಪ್ ಲೈನ್ ಕಾಮಗಾರಿಯಿಂದ ಬನ್ನೇರುಘಟ್ಟ ಹಾಗೂ ಹೊಸೂರು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದೆ.
ಬಿಡಬ್ಲ್ಯೂಎಸ್ಎಸ್ ಬಿ
ಬಿಡಬ್ಲ್ಯೂಎಸ್ಎಸ್ ಬಿ
ಬೆಂಗಳೂರು: ಬೆಂಗಳೂರು ಜಲಮಂಡಳಿ (ಬಿಡಬ್ಲ್ಯೂಎಸ್ಎಸ್ ಬಿ) ನಡೆಸುತ್ತಿರುವ ಪೈಪ್ ಲೈನ್ ಕಾಮಗಾರಿಯಿಂದ ಬನ್ನೇರುಘಟ್ಟ ಹಾಗೂ ಹೊಸೂರು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಿದೆ. 
ಕಳೆದ ಒಂದು ವಾರದಿಂದ ಬಿಡಬ್ಲ್ಯೂಎಸ್ಎಸ್ ಬಿ ಚರಂಡಿ ಪೈಪ್ ಲೈನ್ ಕಾಮಗಾರಿ ನಡೆಸುತ್ತಿದ್ದು, ಧೂಳು ತುಂಬಿದ ಟ್ರಾಫಿಕ್ ನಲ್ಲೇ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಗಿದೆ. ಕಾಮಗಾರಿ ಪ್ರಾರಂಭಕ್ಕೂ ಮುನ್ನ ಹಿರಿದಾದ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳು ಈಗ ಅನಿವಾರ್ಯವಾಗಿ ಪೋಟಲಪ್ಪ ಗಾರ್ಡನ್ ಸೇರಿದಂತೆ ಹಲವು ಕಿರಿದಾದ ರಸ್ತೆಗಳ ಮೂಲಕವೇ ಸಾಗಬೇಕಾಗಿದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪೊಲೀಸರು ಆಡೂಗೋಡಿ,  ಮೈಕೋ ಬಂಡೆ ಸಿಗ್ನಲ್ ಗಳನ್ನು ಟ್ರಾಫಿಕ್-ಫ್ರೀ ಸಿಗ್ನಲ್ ನ್ನಾಗಿ ಪರಿವರ್ತಿಸಿದರೂ ಸಹ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. 
ಆಡುಗೋಡಿ ಜಂಕ್ಷನ್,  ಮೈಕೋ ಬಂಡೆ ಜಂಕ್ಷನ್‌, ಬನ್ನೇರು ಘಟ್ಟ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಬಿಡಬ್ಲ್ಯೂಎಸ್ಎಸ್ ಬಿ ಕಾಮಗಾರಿ ಪೂರ್ಣಗೊಳ್ಳಲು 15 ದಿನ ಬೇಕಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com