ಕರ್ನಾಟಕ: ಜಿಲ್ಲೆಗಳಲ್ಲಿ ಆಧಾರ್ ಪರಿಹಾರ ಕೇಂದ್ರಗಳ ಕೊರತೆ; ಜನತೆಗೆ ಸಮಸ್ಯೆ

ಪ್ರತಿಬಾರಿಯೂ ಆಧಾರ್ ಆಧಾರಿತ ಅಭಿಯಾನ ಘೋಷಣೆಯಾದಾಗ ಅದಕ್ಕೆ ಸಂಬಂಧಪಟ್ಟ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರತಿಬಾರಿಯೂ ಆಧಾರ್ ಆಧಾರಿತ ಅಭಿಯಾನ ಘೋಷಣೆಯಾದಾಗ ಅದಕ್ಕೆ ಸಂಬಂಧಪಟ್ಟ ದೂರು-ದುಮ್ಮಾನಗಳ ಸಂಖ್ಯೆ ಕೂಡ ಜೊತೆ ಜೊತೆಗೇ ಹೆಚ್ಚಾಗುತ್ತದೆ ಎಂದು ಆಧಾರ್ ಅಧಿಕಾರಿಗಳು ಹೇಳುತ್ತಾರೆ. ಆದರೂ ಕೂಡ ಜಿಲ್ಲಾ ಮಟ್ಟದಲ್ಲಿ ದೂರು ದುಮ್ಮಾನಗಳ ಕೋಶಗಳ ಕೊರತೆಯಿಂದಾಗಿ ದೂರದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿರುವವರು ನೂರಾರು ಕಿಲೋ ಮೀಟರ್ ದೂರದಿಂದ ಬೆಂಗಳೂರಿನ ಆಧಾರ್ ಕೇಂದ್ರಕ್ಕೆ ಬರುವ ಅಗತ್ಯವಿದೆ.
ತಮ್ಮ ಸಮಸ್ಯೆ ಬಗ್ಗೆ ಮಾತನಾಡಿದ ತುಮಕೂರಿನ ಗುಬ್ಬಿ ತಾಲ್ಲೂಕಿನ ನಿವಾಸಿ ಮಂಜುನಾಥ್, 2012ರಿಂದ 2 ಬಾರಿ ನಾನು ದಾಖಲು ಮಾಡಿಕೊಂಡಿದ್ದೇನೆ. ಆದರೆ ನನಗೆ ಇನ್ನೂ ಕೂಡ ಆಧಾರ್ ಸಂಖ್ಯೆ ಸಿಕ್ಕಿಲ್ಲ. ಅವರು ಆಧಾರ್ ಕಾರ್ಡಿಗಾಗಿ ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿದ್ದಾರೆ.
ಸುಲೈಮಾನ್ ಖಾನ್ ಎಂಬುವವರು ತಮ್ಮ ಆಧಾರ್ ಕಾರ್ಡಿನ ವಿಳಾಸವನ್ನು ನವೀಕರಿಸಲು ಬಯಸುತ್ತಿದ್ದಾರೆ. ಇದಕ್ಕಾಗಿ ಅವರು ಕೋಲಾರದಿಂದ ಬೆಂಗಳೂರಿಗೆ ಬರಬೇಕಾಗಿದೆ. ಹೀಗೆ ನೂರಾರು ಮಂದಿ ಬೆಂಗಳೂರಿನ ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆಗಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com