ಶಂಕರ ಜಯಂತಿ ಪ್ರಯುಕ್ತ ಮೇ.1 ಕ್ಕೆ ಅದ್ವೈತ-ಅನುಸಂಧಾನಂ ಕನ್ನಡ ನಾಟಕ

ಏ.30 ರಂದು ಆದಿ ಶಂಕರಾಚಾರ್ಯರ ಜಯಂತಿ. ಶಂಕರ ಜಯಂತಿ ಅಂಗವಾಗಿ ಮೇ.1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರವೀಂದ್ರ ಪುಸ್ತಕಾಲಯದ ಸಹಯೋಗದಲ್ಲಿ ಅದ್ವೈತ-ಅನುಸಂಧಾನಂ ಕನ್ನಡ ನಾಟಕ ನಡೆಯಲಿದೆ.
ಅದ್ವೈತ-ಅನುಸಂಧಾನಂ
ಅದ್ವೈತ-ಅನುಸಂಧಾನಂ
ಬೆಂಗಳೂರು: ಏ.30 ರಂದು ಆದಿ ಶಂಕರಾಚಾರ್ಯರ ಜಯಂತಿ. ಶಂಕರ ಜಯಂತಿ ಅಂಗವಾಗಿ ಮೇ.1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರವೀಂದ್ರ ಪುಸ್ತಕಾಲಯದ ಸಹಯೋಗದಲ್ಲಿ ಅದ್ವೈತ-ಅನುಸಂಧಾನಂ ಕನ್ನಡ ನಾಟಕ ನಡೆಯಲಿದೆ. 
ಹಿರಿಯ ಪತ್ರಕರ್ತರಾದ ಎಸ್ಎಲ್ಎನ್ ಸ್ವಾಮಿ ಅವರು ಅದ್ವೈತ ಅನುಸಂಧಾನಂ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದು, ನಾಟಕಕ್ಕೆ  ಕನ್ನಡಪ್ರಭ.ಕಾಂ ನ "ರಾಮಾಯಣ ಅವಲೋಕನ" ಅಂಕಣಕಾರರಾದ ವಿದ್ವಾನ್ ಡಾ.ಪಾವಗಡ ಪ್ರಕಾಶ್ ರಾವ್ ಅವರ ತಾತ್ವಿಕ ಮಾರ್ಗದರ್ಶನವಿದೆ.
ವಿಶ್ವ ರಂಗಭೂಮಿಯಲ್ಲಿ ಶಂಕರ ಭಗವತ್ಪಾದರನ್ನು ಕುರಿತ ಪ್ರಪ್ರಥಮ ಪರಿಪೂರ್ಣ ದೃಶ್ಯರೂಪಕ ಅದ್ವೈತ-ಅನುಸಂಧಾನಂ ಆಗಿದೆ. ಮಧ್ಯಾಹ್ನ 12:30ಕ್ಕೆ ಕೃತಿ ಬಿಡುಗಡೆ ಹಾಗೂ ಮಹಾ-ಅದ್ವೈತಿ ಬಿರುದು ಪ್ರದಾನವೂ ನಡೆಯಲಿದೆ. 
ಕರ್ನಾಟಕ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನ್ಯಾ.ಎನ್.ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಡಾ.ಪಾವಗಡ ಪ್ರಕಾಶ್ ರಾವ್, ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಡಾ.ವಿ.ಆರ್ ಗೌರಿಶಂಕರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೆ.ಎನ್ ವೆಂಕಟನಾರಾಯಣ್, ವಿದ್ವಾನ್ ಡಾ.ಕೆ.ಜಿ ಸುಬ್ರಾಯ ಶರ್ಮ, ಡಾ.ಭಾನುಪ್ರಕಾಶ್ ಶರ್ಮ, ದೈವಜ್ಞ ಕೆ.ಎನ್ ಸೋಮಯಾಜಿ, ವಿದ್ವಾನ್ ಗಣೇಶ್ ಘನಪಾಠಿ, ಶ್ರೀ ಶಂಕರ ವಾಹಿನಿಯ ಸಿಇಒ ಕೆಎಸ್  ಸುರೇಶ್ ಕುಮಾರ್, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ್, ಲಹರಿ ರೆಕಾರ್ಡಿಂಗ್ ಸಂಸ್ಥೆ ಎಂಡಿ ಲಹರಿವೇಲು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com