ವಾರಾಂತ್ಯದಲ್ಲಿ ಸಾಲು ಸಾಲು ರಜೆ: ಕೆಎಸ್ ಆರ್ ಟಿಸಿಯಿಂದ ಹೆಚ್ಚುವರಿ ಬಸ್ ಸೌಲಭ್ಯ

ಸವಜಯಂತಿ, ಕಾರ್ಮಿಕರ ದಿನಾಚರಣೆ, ಸೇರಿದಂತೆ ವಾರಂತ್ಯದಲ್ಲಿ ಸರಣಿ ರಜೆ ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಏಪ್ರಿಲ್ ...
ಕೆಎಸ್ ಆರ್ ಟಿಸಿ ಬಸ್
ಕೆಎಸ್ ಆರ್ ಟಿಸಿ ಬಸ್
ಬೆಂಗಳೂರು: ಬಸವಜಯಂತಿ, ಕಾರ್ಮಿಕರ ದಿನಾಚರಣೆ, ಸೇರಿದಂತೆ ವಾರಂತ್ಯದಲ್ಲಿ ಸರಣಿ ರಜೆ ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಏಪ್ರಿಲ್ 28 ರಿಂದ ಮೇ 1 ರವರೆಗೆ ಹೆಚ್ಚುವರಿ ಬಸ್ ಸೇವೆ ಒದಗಿಸಲಿದೆ,
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಶೃಂಗೇರಿ.ಸೇರಿದಂತೆ ಹಲವು ಸ್ಥಳಗಳಿಗೆ ಸಂಚಾರ ಆರಂಭಿಸಲಿವೆ,
ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿಗಳಿಗೆ ಬಸ್ ಸಂಚಾರ ಆರಂಭಿಸಲಿವೆ.
ಶಾಂತಿನಗರ ಬಿಎಂ ಟಿಸಿ ಬಸ್ ನಿಲ್ದಾಣದಿಂದ ತಿರುಚ್ಚಿ, ಚೆನ್ನೈ, ಕೊಯಂಬತ್ತೂರು, ಹೈದರಾಬಾದ್, ತಿರುಪತಿ,, ವಿಜಯವಾಡ ಸೇರಿದಂತೆ ಅನೇಕ ಸ್ಥಳಗಳಿಗೆ ವಿಶೇಷ ಬಸ್ ಸಂಚಾರ ಆರಂಭವಾಗಲಿದೆ.
ಕೆಎಸ್ ಆರ್ ಟಿಸಿ ಸುಮಾರು 400 ರಿಂದ 500 ಹೆಚ್ಚುವರಿ ಬಸ್ ಗಳನ್ನು ಸಂಚಾರಕ್ಕೆ ಒದಗಿಸಿಲಿದೆ, ಪ್ರಯಾಣಿಕರು ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಮಾಡಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com