ಮದ್ಯ ಸೇವಿಸಿ ಲೇಡಿಸ್ ಹಾಸ್ಟೆಲ್ ಗೆ ಭೇಟಿ: ಮೈಸೂರು ವಿವಿ ರಿಜಿಸ್ಟ್ರಾರ್ ರಾಜಣ್ಣ ವಿರುದ್ಧ ದೂರು

ಮೈಸೂರು ವಿವಿ ಹಂಗಾಮಿ ಉಪಕುಲಪತಿ ಪ್ರೊ.ದಯಾನಂದ ಮಾನೆ ವಿರುದ್ಧ ಗಂಭೀರ ಆರೋಪ ಮಾಡಿದ್ದ ವಿವಿ ರಿಜಿಸ್ಟ್ರಾರ್ ಪ್ರೊ. ರಾಜಣ್ಣ ವಿರುದ್ಧ ಮಹಿಳಾ ವಸತಿ ..
ಮೈಸೂರು ವಿವಿ
ಮೈಸೂರು ವಿವಿ
ಮೈಸೂರು: ಮೈಸೂರು ವಿವಿ ಹಂಗಾಮಿ ಉಪಕುಲಪತಿ ಪ್ರೊ.ದಯಾನಂದ ಮಾನೆ ವಿರುದ್ಧ ಗಂಭೀರ ಆರೋಪ ಮಾಡಿದ್ದ ವಿವಿ ರಿಜಿಸ್ಟ್ರಾರ್ ಪ್ರೊ. ರಾಜಣ್ಣ ವಿರುದ್ಧ ಮಹಿಳಾ ವಸತಿ ನಿಲಯದ ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ.
ಹಾಸ್ಟೆಲ್ ವಾಸಿಗಳು ರಾಜ್ಯಪಾಲರಿಗೂ ಹಾಗೂ ವಿವಿ ಹಂಗಾಮಿ ಕುಲಪತಿ ದಯಾನಂದ ಮಾನೆ ಅವರಿಗೆ ರಾಜಣ್ಣ ವಿರುದ್ಧ ಪತ್ರ ಬರೆದಿದ್ದಾರೆ. ಮಹಿಳಾ ವಸತಿ ನಿಲಯಕ್ಕೆ ಮಧ್ಯಸೇವಿಸಿ ಬಂದು ಕೆಟ್ಟ ಪದ ಬಳಸಿ ಮಾತನಾಡಿದ್ದಾರೆ, ಹೀಗಾಗಿ ರಾಜಣ್ಣ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂದು ಬರೆಯಲಾಗಿದೆ.
ಹಾಸ್ಟೆಲ್ ನಲ್ಲಿ ಸರಿಯಾಗಿ ಊಟ ನೀಡುತ್ತಿಲ್ಲ, ಕಳಪೆ ಗುಣ ಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯಿರು ಮಾರ್ಚ್ 10 ರಂದು ಪ್ರತಿಭಟನೆ ನಡೆಸಿದ್ದರು. ಜೊತೆಗೆ ಮೆಸ್ ಕಂಟ್ರಾಕ್ಟರ್ ಅವರನ್ನು ಬದಲಿಸಬೇಕೆಂದು ಒತ್ತಾಯಿಸಿದ್ದರು, ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ರಿಜಿಸ್ಟ್ರಾರ್ ರಾಜಣ್ಣ ಮದ್ಯ ಸೇವಿಸಿ ಕೆಟ್ಟ ಪದ ಬಳಸಿ ಬೇಜವಬ್ದಾರಿಯಿಂದ ಮಾತನಾಡಿ ಮುಜುಗರ ಉಂಟು ಮಾಡಿದ್ದಾರೆ ಎಂದು 60 ವಿದ್ಯಾರ್ಥಿನಿಯರು ಪತ್ರದಲ್ಲಿ ದೂರಿದ್ದಾರೆ.
ಆಹಾರ ಗುಣಮಟ್ಟ ಸರಿಯಿಲ್ಲ ಎಂಬ ನಮ್ಮ ದೂರನ್ನು ರಾಜಣ್ಣ ಗಂಭೀರವಾಗಿ ಪರಿಗಣಿಸಿಲ್ಲ, ರಾಜಣ್ಣ ಅವರು ಸಮಸ್ಯೆ ಬಗೆಹರಿಸದೇ ಮಧ್ಯರಾತ್ರಿ 1 ಗಂಟೆಗೆ ಅಲ್ಲಿಂತ ತೆರಳಿದರು. ನಾವು ಅಂದಿನ ರಾತ್ರಿ ಊಟವಿಲ್ಲದೇ ಹಸಿವಿನಲ್ಲೇ ಮಲಗಿದೆವು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಮತ್ತೆ ಒಂದು ವಾರದ ನಂತರ ಅದೇ ಮೆಸ್ ಕಂಟ್ರಾಕ್ಟರ್ ಗೆ ಟೆಂಡರ್ ನೀಡಲಾಗಿತ್ತು. ಈ ಬಗ್ಗೆ ಪ್ರಶ್ನಿಸಲು ಅವರ ಕಚೇರಿಗೆ ತೆರಳಿದ್ದವು, ಇಷ್ಟವಿದ್ದರೇ ಊಟ ಮಾಡಬಹುದು, ಇಲ್ಲದಿದ್ದರೇ ಅಲ್ಲಿಂದ ಹೋಗಬಹುದು ಎಂದು ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ.
ಆದರೆ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ರಾಜಣ್ಣ, ನಾನು ಹೆಚ್ಚುವರು ಪೊಲೀಸ್ ಆಯುಕ್ತ ಉಮೇಶ್ ಸೇಟ್, ಇನ್ಸ್ ಪೆಕ್ಟರ್ ರವೀಂದ್ರ, ಮತ್ತು ಕೆಲ ಸಿಂಡಿಕೇಟ್ ಸದಸ್ಯರು ಹಾಗೂ ವಾರ್ಡನ್ ಮತ್ತು ಡೀನ್ ಗಳ ಜೊತೆ ಹಾಸ್ಟೆಲ್ ಗೆ ತೆರಳಿದ್ದೆ ಎಂದು ಹೇಳಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರೊ. ದಯಾನಂದ ಮಾನೆ, ಪ್ರೊ. ರಾಜಣ್ಣ ಅಂದು ಕುಡಿದು ವಸತಿ ನಿಲಯಕ್ಕೆ ತೆರಳಿದ್ದನ್ನು ಅಲ್ಲಿದ್ದ ನೂರಾರು ವಿದ್ಯಾರ್ಥಿನಿಯರು ನೋಡಿದ್ದಾರೆ. ಆದರೆ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡುವ ಸಮಯ ಅದಾಗಿರಲಿಲ್ಲ ಎಂದು ಮಾನೆ ತಿಳಿಸಿದ್ದಾರೆ.
ನಾನು ಬೆಳಗ್ಗೆ 8.45 ಕ್ಕೆ ಲೇಡಿಸ್ ಹಾಸ್ಟೆಲ್ ಗೆ ತೆರಳಿದ್ದನ್ನು ರಾಜಣ್ಣ ದೊಡ್ಡ ಪ್ರಕರಣ ವಾಗಿಸಿದರು. ಆದರೆ ರಾಜಣ್ಣ ಅವರು ರಾತ್ರಿ ಮದ್ಯ ಸೇವಿಸಿ ಹಾಸ್ಟೆಲ್ ಗೆ ಭೇಟಿ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಮಾನೆ, ಈ ಸಂಬಂಧ ರಾಜಣ್ಣ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com