ವೀರಶೈವ ಲಿಂಗಾಯತ ಬೇರೆಯಲ್ಲ , ಒಂದೇ: ವೀರಶೈವ ಮಹಸಭಾ

ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಲಿಂಗಾಯಿತ ಮತ್ತು ವೀರಶೈವ ಸಮುದಾಯಗಳಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಕ್ಕೆ ಅಖಿಲ ಭಾರತ...
ಶ್ಯಾಮನೂರು ಶಿವಶಂಕರಪ್ಪ ಮತ್ತು ಈಶ್ವರ್ ಖಂಡ್ರೆ
ಶ್ಯಾಮನೂರು ಶಿವಶಂಕರಪ್ಪ ಮತ್ತು ಈಶ್ವರ್ ಖಂಡ್ರೆ
ಬೆಂಗಳೂರು: ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಲಿಂಗಾಯಿತ ಮತ್ತು ವೀರಶೈವ ಸಮುದಾಯಗಳಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಅಂತ್ಯ ಹಾಡಲು ನಿರ್ಧರಿಸಿದೆ. ಪ್ರತ್ಯೇಕ ಧರ್ಮ ಸ್ಥಾನಮಾನಕ್ಕಾಗಿ ಒಗ್ಗಟ್ಟಾಗಿ ಹೋರಾಡಬೇಕೆಂದು ಮಹಾಸಭಾ ತಿಳಿಸಿದೆ.
ವೀರಶೈವ ಮತ್ತು ಲಿಂಗಾಯಿತ ಬೇರೆ ಬೇರೆಯಲ್ಲ, ಎರಡೂ ಒಂದೇ, ವೀರಶೈವ ಲಿಂಗಾಯತಕ್ಕೆ ಸ್ವತಂತ್ರ್ಯ ಸ್ಥಾನಮಾನ ಪಡೆಯಲು ಹೋರಾಟ ಮುಂದುವರಿಸುವುದಾಗಿ ಮಹಾಸಭಾ ತಿಳಿಸಿದೆ. 
ಮಹಾಸಭಾ ಸದಸ್ಯರ ಜೊತೆ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರ ಖಂಡ್ರೆ, ಕೆಲ ಮಂದಿ ತಮ್ಮ ಅಸಂಬದ್ಧ ಹೇಳಿಕೆಗಳ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿರುವುದು ದುರಾದೃಷ್ಟ ಎಂದು ಹೇಳಿದ್ದಾರೆ.
ಮಹಾಸಭೆಯ ನಿಯಮ, ನಿಬಂಧನೆ ಒಪ್ಪಿ ಸದಸ್ಯರಾಗಿದ್ದ ಕೆಲವರು ಈಗ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು  ಒಮ್ಮತ ಮೂಡಿಸಲು ಸಭೆ ನಿರ್ಣಯಿಸಿತು. ಎಲ್ಲರೊಂದಿಗೆ ಮಾತನಾಡಿ ಸದ್ಯದಲ್ಲೇ ದಿನಾಂಕ ಪ್ರಕಟಿ
ಸಲಾಗುವುದು ಎಂದು ಹೇಳಿದರು.
ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್, ಲಿಂಗಾಯತ ಮತ್ತು ವೀರಶೈವ ಒಂದೇ ಅಲ್ಲ ಅವೆರಡು ಬೇರೆ ಬೇರೆ ಎಂದು ಹೇಳಿಕೆ ನೀಡಿದ್ದರು.ಇದೇ ರೀತಿಯ ಹೇಳಿಕೆಗಳು ಮುಂದುವರಿದರೇ ಸಮುದಾಯ ಒಡೆದು ಇಬ್ಭಾಗವಾಗುತ್ತದೆ ಎಂದು ವೀರಶೈವ ಮಹಾಸಭಾ ಅಧ್ಯಕ್ಷ ಈಶ್ವರ ಖಂಡ್ರೆ ಮತ್ತು ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ವೀರಶೈವ ಮತ್ತು ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು, ವೀರಶೈವ ಮತ್ತು ಲಿಂಗಾಯತ ಒಂದೇ,  ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ರಾಜ್ಯ ವೀರಶೈವ ಪಂಚಮಸಾಲಿ ಅಸೋಸಿಯೇಷನ್ ಸದಸ್ಯರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com