ಲಾಲ್ ಬಾಗ್ ಪುಷ್ಪ ಪ್ರದರ್ಶನ: ಎರಡನೇ ದಿನ 30 ಸಾವಿರಕ್ಕೂ ಅಧಿಕ ಮಂದಿ ಭೇಟಿ

ಲಾಲ್ ಬಾಗ್ ಮೆಟ್ರೊ ನಿಲ್ದಾಣ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ನಂತರ ಸ್ವಾತಂತ್ರ್ಯ ದಿನಾಚರಣೆ...
ಕುವೆಂಪು ಅವರ ಮನೆಯ ಮಾದರಿ ಲಾಲ್ ಬಾಗ್ ಪುಷ್ಪ ಪ್ರದರ್ಶನದಲ್ಲಿ ಈ ವರ್ಷದ ಪ್ರಮುಖ ಆಕರ್ಷಣೆ
ಕುವೆಂಪು ಅವರ ಮನೆಯ ಮಾದರಿ ಲಾಲ್ ಬಾಗ್ ಪುಷ್ಪ ಪ್ರದರ್ಶನದಲ್ಲಿ ಈ ವರ್ಷದ ಪ್ರಮುಖ ಆಕರ್ಷಣೆ
Updated on
ಬೆಂಗಳೂರು: ಲಾಲ್ ಬಾಗ್ ಮೆಟ್ರೊ ನಿಲ್ದಾಣ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ನಂತರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಫಲಪುಷ್ಪ ಪ್ರದರ್ಶನದ ಎರಡನೇ ದಿನವಾದ ನಿನ್ನೆ ಸುಮಾರು 31,000 ಮಂದಿ ವೀಕ್ಷಕರು ಆಗಮಿಸಿದ್ದರು. 
ಇದಕ್ಕೆ ಪ್ರಮುಖ ಕಾರಣ ಮೆಟ್ರೊ ರೈಲು. ನಿನ್ನೆ ರಾತ್ರಿ 9 ಗಂಟೆಯವರೆಗೆ ಸುಮಾರು 23,979 ಪ್ರಯಾಣಿಕರು ಲಾಲ್ ಬಾಗ್ ರೈಲಿನಲ್ಲಿ ಬಂದಿಳಿದಿದ್ದಾರೆ. 
ತೋಟಗಾರಿಕೆ ಇಲಾಖೆಯ ಸಹ ನಿರ್ದೇಶಕ ಎಂ.ಜಗದೀಶ್, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಅದ್ಭುತವಾಗಿದೆ. ಮೊದಲ ದಿನ ಸುಮಾರು 12,000 ಜನರು ಭೇಟಿ ನೀಡಿದರೆ ನಿನ್ನೆ ಶನಿವಾರ 21,000 ವಯಸ್ಕರು, 3,000 ಮಕ್ಕಳು ಮತ್ತು 7,000ಕ್ಕೂ ಅಧಿಕ ಮಂದಿ ಪಾಸು ಹೊಂದಿರುವವರು ಭೇಟಿ ನೀಡಿದ್ದರು. ಪಾಸುಗಳನ್ನು ಮೈಸೂರಿನ ತೋಟಗಾರಿಕೆ ಸೊಸೈಟಿ ಜೀವಾವಧಿ ಸದಸ್ಯರಿಗೆ ನೀಡಿದೆ ಎಂದರು.
ಈ ಬಾರಿ ಇಷ್ಟೊಂದು ಜನರು ಆಗಮಿಸಲು ಕಾರಣ ಮೆಟ್ರೊ ನಿಲ್ದಾಣ. ಇಂದು ಸುಮಾರು 50,000 ಜನರು ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಜಗದೀಶ್. ಕಳೆದ ವರ್ಷ ಇದೇ ಸಮಯದಲ್ಲಿ ಎಷ್ಟು ಜನರು ಭೇಟಿ ನೀಡಿದ್ದರು ಎಂದು ನಿಖರ ಮಾಹಿತಿ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲವಾದರೂ ಭೇಟಿ ನೀಡುವವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಮೆಟ್ರೊದಲ್ಲಿ ಬಂದವರು ಎನ್ನುತ್ತಾರೆ. ಕಳೆದ ವರ್ಷ ಲಾಲ್ ಬಾಗ್ ಸುತ್ತಮುತ್ತ 25 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದರೆ ಈ ವರ್ಷ 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು ಜಗದೀಶ್.
ಬೆಂಗಳೂರು ಮೆಟ್ರೊ ರೈಲು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್, ಲಾಲ್ ಬಾಗ್ ನಿಲ್ದಾಣದಲ್ಲಿ ಕಳೆದ ಶನಿವಾರ 3,890 ಜನರು ಪ್ರಯಾಣಿಸಿದ್ದರೆ ಈ ವಾರ 23,879 ಆಗಿದೆ. ಜನದಟ್ಟಣೆಯನ್ನು ಸಂಭಾಳಿಸಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತೋಟಗಾರಿಕೆ ಇಲಾಖೆ ಮತ್ತು ಬೆಂಗಳೂರು ಮೆಟ್ರೊ ಲಾಲ್ ಬಾಗ್ ಗೆ ಹೋಗುವವರಿಗೆ ನಾಮಫಲಕಗಳನ್ನು ಅಳವಡಿಸಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com