ಅದೇ ರೈಲಿನಲ್ಲಿ ಸಂಜೀವ ಶೆಟ್ಟಿ ಅವರ ಸಂಬಂಧಿಕರಾದ ಗಣೇಶ್ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ಕೂಡ ಬೇರೊಂದು ಕೋಟ್ ಲ್ಲಿದ್ದರು. ಬೆಳಗ್ಗೆ 10.30ಕ್ಕೆ ರೈಲು ಉಡುಪಿಗೆ ಆಗಮಿಸಿತು, ಈ ವೇಳೆ ದಂಪತಿ ದೀರ್ಘ ನಿದ್ರೆಯಲ್ಲಿದ್ದರು, ಸಂಬಂಧಿಕರು ಎಬ್ಬಿಸಲು ಬಂದಾಗ ಅನುಮಾನ ಗೊಂಡು ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ, ಸುಮಾರು 4 ಲಕ್ಷ ರು. ಮೌಲ್ಯದ ಹಣ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.