ಮೈಸೂರು: ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳ 'ಮಿಂಚಿನ ಸಂಚಾರ'!

ಶಾಲೆಗಳಲ್ಲಿ ಶಿಕ್ಷಕರ ಕೆಲಸದ ಅವಧಿ ಮೇಲೆ ಕಣ್ಣಿಟ್ಟಿರಲು ಸಾರ್ವಜನಿಕ ನಿರ್ದೇಶನ ಇಲಾಖೆ ಮಿಂಚಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು:ಶಾಲೆಗಳಲ್ಲಿ ಶಿಕ್ಷಕರ ಕೆಲಸದ ಅವಧಿ ಮೇಲೆ ಕಣ್ಣಿಟ್ಟಿರಲು ಸಾರ್ವಜನಿಕ ನಿರ್ದೇಶನ ಇಲಾಖೆ ಮಿಂಚಿನ ಸಂಚಾರ ಎಂಬ ಮೂವರು ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದೆ. 
ಮೈಸೂರು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಈ ತಂಡ ಪ್ರತಿದಿನ ದಿಢೀರ್ ಭೇಟಿ ನೀಡಲಿದೆ. ಸಾರ್ವಜನಿಕ ನಿರ್ದೇಶನ ಇಲಾಖೆಯ ಉಪ ನಿರ್ದೇಶಕ ಬಿ.ಕೆ.ಎಸ್.ವರ್ದನ, ಇಂತಹ 21 ತಂಡಗಳನ್ನು ರಚಿಸಿದ್ದು ಪ್ರತಿ ತಂಡದಲ್ಲಿ ಬ್ಲಾಕ್ ಶೈಕ್ಷಣಿಕ ಅಧಿಕಾರಿ ಸೇರಿದಂತೆ ಮೂವರು ಸದಸ್ಯರಿರುತ್ತಾರೆ ಎಂದು ಹೇಳಿದರು.
ಇದೇ ಶುಕ್ರವಾರದಿಂದ ತಂಡ ಸರ್ಕಾರಿ ಶಾಲೆ ಭೇಟಿಯನ್ನು ಆರಂಭಿಸಲಿದೆ. ಈ ತಂಡಕ್ಕೆ ಸುಮಾರು 11 ವಾಹನಗಳನ್ನು ನೀಡಲಾಗಿದೆ. ಪ್ರತಿ ತಂಡ ಕಡ್ಡಾಯವಾಗಿ ದಿನಕ್ಕೆ 3 ಶಾಲೆಗಳಿಗೆ ಭೇಟಿ ನೀಡಬೇಕು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಸಾರ್ವಜನಿಕ ನಿರ್ದೇಶನ ಇಲಾಖೆಯ ಉಪ ನಿರ್ದೇಶಕರು, ಕೆಲಸದ ಅವಧಿಯಲ್ಲಿ ಶಿಕ್ಷಕರು ಶಾಲೆಯಲ್ಲಿ ಇರುತ್ತಾರೆಯೇ, ಇಲ್ಲವೇ ಎಂದು ತಂಡ ಪರೀಕ್ಷೆ ನಡೆಸಲಿದೆ. ಮಧ್ಯಾಹ್ನದ ಬಿಸಿಯೂಟವನ್ನು ತಪಾಸಣೆ ಮಾಡುವುದು, ಮಕ್ಕಳ ಕಲಿಕೆ ಕೌಶಲ್ಯ,
ಮೂಲಭೂತ ಸೌಕರ್ಯ ಮತ್ತು ಶಾಲೆಗಳಲ್ಲಿರುವ ಇತರೆ ಸೌಕರ್ಯಗಳ ಬಗ್ಗೆ ತಂಡ ಪರಿಶೀಲನೆ ನಡೆಸಲಿದೆ.
ಒಂದು ವೇಳೆ ಶಾಲಾ ಅವಧಿಯಲ್ಲಿ ಶಿಕ್ಷಕರು ಕರ್ತವ್ಯದಲ್ಲಿಲ್ಲದಿದ್ದರೆ ಉಪ ನಿರ್ದೇಶಕರು ನೋಟಿಸ್ ಜಾರಿ ಮಾಡಲಿದ್ದಾರೆ. ಅಂತಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೆ, ಮಕ್ಕಳ ಹಾಜರಾತಿ ಶಾಲೆಗಳಲ್ಲಿ ಕಡಿಮೆಯಿದ್ದರೆ ತಂಡ ಈ ವಿಷಯವನ್ನು ಸಾರ್ವಜನಿಕ ನಿರ್ದೇಶನ ಇಲಾಖೆಯ ಉಪ ನಿರ್ದೇಶಕರ ಗಮನಕ್ಕೆ ತರಲಿದೆ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 1,911 ಸರ್ಕಾರಿ ಪ್ರಾಥಮಿಕ ಶಾಲೆಗಳು, 232 ಹೈಸ್ಕೂಲ್ ಗಳಿದ್ದು 8,931 ಶಿಕ್ಷಕ-ಶಿಕ್ಷಕಿಯರಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ತಂಡ ದಿಢೀರ್ ಭೇಟಿ ನೀಡುವ ಮಿಂಚಿನ ಸಂಚಾರ ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದು ಮೈಸೂರು ಜಿಲ್ಲೆ ಎರಡನೆಯದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com