ಮೈಸೂರು: ಈ ವರ್ಷ ಗಜಪಯಣದ ನೇರ ಪ್ರಸಾರ ಮಾಡಲಿರುವ ಜಿಲ್ಲಾಡಳಿತ

ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ದಸರಾ ಮೆರವಣಿಗೆಯಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳು ಅರಣ್ಯದಿಂದ ಮೈಸೂರು ನಗರಕ್ಕೆ ಪ್ರವೇಶಿಸುವ ಗಜಪಯಣವನ್ನು ಇದೇ ಮೊದಲ ಬಾರಿಗೆ ಜನರು ನೇರವಾಗಿ ನೋಡಬಹುದಾಗಿದೆ. ಮೈಸೂರು ಜಿಲ್ಲಾಡಳಿತ ಇಡೀ ದೃಶ್ಯವನ್ನು ವೆಬ್ ಸೈಟ್ ನಲ್ಲಿ ನೇರವಾಗಿ ಪ್ರಸಾರ ಮಾಡಲು ವ್ಯವಸ್ಥೆ ಮಾಡಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ವಿವರ ನೀಡಿದ  ಜಿಲ್ಲಾಧಿಕಾರಿ ಡಿ.ರಂದೀಪ್, ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್ ಲ್ಲಿ ಅಥವಾ ಬೇರೆ ಯಾವುದಾದರೂ ನೇರ ಪ್ರಸಾರದ ವೆಬ್ ಸೈಟ್ ಲ್ಲಿ ಗಜಪಯಣದ ನೇರ ಪ್ರಸಾರ ಮಾಡಲಾಗುವುದು. ಇದೇ ತಿಂಗಳ 12ರಂದು ಆನೆಗಳು  ಹುಣಸೂರು ಹತ್ತಿರ ನಾಗಪುರ ಶಿಬಿರದಿಂದ ಮೊದಲ ತಂಡದ ಪಯಣ ಆರಂಭವಾಗಲಿದ್ದು ಅಂದೇ ದಸರಾ-2017ರ ವೆಬ್ ಸೈಟ್ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಗಜಪಯಣದ ನೇರ ಪ್ರಸಾರದ ವೆಬ್ ಸೈಟ್ ಲಿಂಕ್ ನ್ನು ಜಿಲ್ಲಾಡಳಿತ ಬಹಿರಂಗಪಡಿಸಲಿದೆ. ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ 15 ಆನೆಗಳಲ್ಲಿ 8 ಆನೆಗಳು ಇದೇ 12ರಂದು ತಮ್ಮ ಮೆರವಣಿಗೆ ಆರಂಭಿಸಿ ಮೈಸೂರಿಗೆ 14ರಂದು ತಲುಪಲಿದೆ.ಉಳಿದ ಆನೆಗಳ ನಿರ್ಗಮನದ ಬಗ್ಗೆ ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ. ಮೂಲಗಳ ಪ್ರಕಾರ,  ಉಳಿದ ಆನೆಗಳೂ ಕೂಡ ಆಗಸ್ಟ್ 20ರ ಹೊತ್ತಿಗೆ ಮೈಸೂರು ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಆನೆಗಳ ಮೊದಲ ತಂಡದಲ್ಲಿ ಅರ್ಜುನ, ಗಜೇಂದ್ರ, ಅಭಿಮನ್ಯು, ವರಲಕ್ಷ್ಮಿ, ಬಲರಾಮ, ಭೀಮ, ಕಾವೇರಿ ಮತ್ತು ವಿಜಯಗಳಿರುತ್ತವೆ.
ಆನೆಗಳು ಕಾಡಿನಿಂದ ಪುರಕ್ಕೆ ಪ್ರವೇಶಿಸುವ ಮುನ್ನ ನಾಗರಹೊಳೆಯಲ್ಲಿ ಬುಡಕಟ್ಟು ಜನರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಗಜಪಯಣಕ್ಕೆ ಚಾಲನೆ ನೀಡಲಿದ್ದು, ಎಲ್ ಇಡಿ ಪರದೆ ಮೇಲೆ 15 ನಿಮಿಷಗಳ ದಸರಾ ಆನೆಗಳು ಮತ್ತು ಮಾವುತರ ಬಗ್ಗೆ ಕಿರುಚಿತ್ರ ಪ್ರದರ್ಶಿಸಲಾಗುತ್ತಿದೆ.
ಹೆಲಿಕಾಪ್ಟರ್ ನಲ್ಲಿ ಸವಾರಿ: ಈ ವರ್ಷ ಕೂಡ ಮೈಸೂರು ಜಿಲ್ಲಾಡಳಿತ ಪರಂಪರೆ ನಗರಿ ಮೈಸೂರಿನ ವೀಕ್ಷಣೆಗೆ ಹೆಲಿಕಾಪ್ಟರ್ ಸವಾರಿಯನ್ನು ಜನರಿಗೆ ಒದಗಿಸಲಿದೆ. ಸಾರ್ವಜನಿಕರು ಟಿಕೆಟ್ ಗಳನ್ನು ಬುಕ್ ಮೈಶೊನಲ್ಲಿ ಕಾಯ್ದಿರಿಸಬಹುದು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com