ರಾಣೆಬೆನ್ನೂರು: ಆ್ಯಂಬುಲೆನ್ಸ್ ಗೆ ಡಿಸೇಲ್ ಹಾಕಿಸಲು ಚಾಲಕನಿಂದ ಗರ್ಭಿಣಿಯ ಕಿವಿಯೋಲೆ ಒತ್ತೆ!

ತುರ್ತು ಚಿಕಿತ್ಸೆಗಾಗಿ ರಾಣೆ ಬೆನ್ನೂರು ತಾಲ್ಲೂಕು ಆಸ್ಪತ್ರೆಯಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ಗರ್ಭಿಣಿಯನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ಗೆ ಇಂಧನ ಹಾಕಿಸುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ತುರ್ತು ಚಿಕಿತ್ಸೆಗಾಗಿ ರಾಣೆ ಬೆನ್ನೂರು ತಾಲ್ಲೂಕು ಆಸ್ಪತ್ರೆಯಿಂದ ದಾವಣಗೆರೆ ಜಿಲ್ಲಾಸ್ಪತ್ರೆಗೆ ಗರ್ಭಿಣಿಯನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ಗೆ ಇಂಧನ ಹಾಕಿಸುವ ಸಲುವಾಗಿ ಮಹಿಳೆಯ ಕಿವಿಯೋಲೆ ಒತ್ತೆಯಿಡುವಂತೆ ಚಾಲಕ ಬಲವಂತ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಣೆ ಬೆನ್ನೂರು ಅಂಕ್ಸಾಪುರ ತಾಂಡ್ಯಾದ ಧನರಾಜ್ ಹನುಮಂತಪ್ಪ ಲಮಾಣಿ ಎಂಬುವರ ಅತ್ತಿಗೆ ಸಕ್ರಿ ಬಾಯಿ ಈ ವಿಷಯವನ್ನು ಲೋಕಾಯುಕ್ತರ ಗಮನಕ್ಕೆ ತಂದಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ದಾವಣೆಗೆರೆ  ಪೊಲೀಸ್ ಎಸ್ ಪಿ ಅವರಿಗೆ ಈ ಸಂಬಂಧ ತನಿಖೆಗೆ ಆದೇಶಿಸಿದ್ದರು.
ಆ್ಯಂಬುಲೆನ್ಸ್ ಚಾಲಕ ಮಂಜುನಾಥ್ ಪರ್ವತೇರಾ ದಾವಣಗೆರೆ ತಲುಪಿದಾಗ ಡೀಸೆಲ್ ಗಾಗಿ 800 ರು ಹಣ ನೀಡುವಂತೆ ಪೀಡಿಸಿದ್ದಾನೆ.  ಈ ವೇಳೆ ಲಮಾಣಿ ಸಕ್ರಿ ಬಾಯಿಗೆ ಸೇರಿದ ಕಿವಿಯೋಲೆ ಅಡವಿಟ್ಟು ಹಣ ನೀಡಿದ್ದಾನೆ. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದೆ.
ಚಾಲಕನ ಕಾನೂನು ಬಾಹಿರ ವರ್ತನೆ ಬಗ್ಗೆ ಪ್ರಶ್ನಿಸಿರುವ ಲೋಕಾಯುಕ್ತ ಮಹಿಳೆಗೆ 800 ರು ಹಣವನ್ನು 8 ವಾರಗಳಲ್ಲಿ ವಾಪಸ್ ನೀಡುವಂತೆ ಇಲಾಖೆಗೆ ಸೂಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com