ಬಿಡಿಎ ಗೆ ಅರ್ಜಿ ಹಾಕಿ, ಅದೇ ದಿನ ಫ್ಲ್ಯಾಟ್ ಪಡೆಯಿರಿ: ಪ್ರಾಧಿಕಾರದ ಹೊಸ ಯೋಜನೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2,705 ಫ್ಲ್ಯಾಟ್ ಗಳನ್ನು ಗುಟ್ಟಹಳ್ಳಿಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಹಂಚಿಕೆ ಮಾಡಲಾಗುವುದು. ...
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2,705 ಫ್ಲ್ಯಾಟ್ ಗಳನ್ನು ಗುಟ್ಟಹಳ್ಳಿಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಹಂಚಿಕೆ ಮಾಡಲಾಗುವುದು. ಆರಂಭಿಕ ಡೆಪಾಸಿಟ್ ಪಾವತಿಸಿ ಅವಶ್ಯಕತೆಯಿರುವ ದಾಖಲಾತಿಗಳನ್ನು ನೀಡಿದರೇ ಅದೇ ದಿನ ಫ್ಲ್ಯಾಟ್ ಕೂಡ ಹಂಚಿಕೆ ಮಾಡಲಾಗುವುದು. 
ಇದೇ ಮೊದಲ ಬಾರಿಗೆ ಈ ಟೇಬಲ್ ಸ್ಕೀಮ್ ಪ್ರಾರಂಭಿಸಲಾಗುತ್ತಿದೆ. ಶುಕ್ರವಾರ ಈ ಹೊಸ ಯೋಜನೆ ಆರಂಭವಾಗುತ್ತಿದ್ದು, ಇದಕ್ಕಾಗಿ ಹಲವು ಅರ್ಜಿಗಳು ಬಂದಿವೆ ಎಂದು ಬಿಡಿಎ ಎಂಜಿನೀಯರ್ ಪಿಎನ್ ನಾಯಕ್ ಹೇಳಿದ್ದಾರೆ.
ವಲಗೇರಹಳ್ಳಿ, ಆಲೂರು, ಮಾಳಗಾಳ, ಕಣಿಮಿಣಿಕೆ, ಕೊಮ್ಮಘಟ್ಟ, ಮತ್ತು ದೊಡ್ಡಬನಹಳ್ಳಿಯಲ್ಲಿ ಒಟ್ಟು 2,705 ಫ್ಲ್ಯಾಟ್ ಗಳಿದ್ದು,  176 ಒಂದು ಬಿಎಚ್ ಕೆ ಮತ್ತು 139 ಮೂರು ಬಿಎಚ್ ಕೆ ಫ್ಲ್ಯಾಟ್ ಗಳಿದ್ದು, ಉಳಿದವೆಲ್ಲಾ ಎರಡು ಕೊಠಡಿಯುಳ್ಳ ಫ್ಲ್ಯಾಟ್ ಗಳಾಗಿವೆ ಎಂಗು ಸೂಪರಿಂಟೆಂಡ್ ಇಂಜಿನೀಯರ್ ಎನ್,ಜಿ ಗೌಡಯ್ಯ ಹೇಳಿದ್ದಾರೆ.
ಯಾವ ಏರಿಯಾ  ಆಯ್ಕೆ ಮಾಡುತ್ತಾರೋ ಅದರ ಅನ್ವಯ ಫ್ಲ್ಯಾಟ್ ನ ಬೆಲೆ ಇರುತ್ತದೆ. 1 ಬಿಎಚ್ ಕೆಗೆ 11 ಲಕ್ಷ, 2 ಬಿಎಚ್ ಕೆಗೆ 25 ರಿಂದು 30ಲಕ್ಷ ಹಾಗೂ 3 ಬಿಎಚ್ ಕೆ ಗೆ 40 ಲಕ್ಷ ರು ಬೆಲೆಯಿರುತ್ತದೆ.  ಅರ್ಜಿಗೆ 200 ರು, ಅರ್ಜಿ ನೋಂದಣಿಗೆ 400 ರು ವೆಚ್ಚ ತಗಲುತ್ತದೆ.
ಕೆನರಾ ಬ್ಯಾಂಕ್ ನಲ್ಲಿ ಡಿಡಿ ತೆಗೆದು ನಂತರ ಬಿಡಿಎಗೆ ಪಾವತಿಸಬೇಕಾಗುತ್ತದೆ. ಫ್ಲ್ಯಾಟ್ ನ ಒಟ್ಟು ಮೊತ್ತದ ಶೇ. 12,5 ರಷ್ಟು ಹಣವನ್ನು ಆರಂಭಿಕವಾಗಿ ಪಾವತಿಸಬೇಕಾಗುತ್ತದೆ. ಉಳಿದ ಹಣವನ್ನು ಅಭ್ಯರ್ಥಿಯ ಹೆಸರಿಗೆ ಫ್ಲ್ಯಾಟ್ ರಿಜಿಸ್ಟ್ರಾರ್ ಆದ  ಆರು ತಿಂಗಳ ಒಳಗೆ ಪಾವತಿಸಬೇಕಾಗುತ್ತದೆ. ಪಾಸ್ ಪೋರ್ಟ್ ಸೈಜ್ ಫೋಟೋ, ವಾಸ ಪತ್ರ, ಅರ್ಜಿದಾರನು 5 ವರ್ಷಗಳ ಕಾಲದಿಂದ ರಾಜ್ಯದಲ್ಲಿ ವಾಸಿಸುತ್ತಿದ್ದಾನೆಂದು ದೃಢೀಕರಿಸುವ ವಾಸ ಪ್ರಮಾಣ ಪತ್ರ ನೀಡಬೇಕಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com