ಅರ್ಜಿ ಸಲ್ಲಿಸಿದ ದಿನವೇ ಫ್ಲ್ಯಾಟ್ ಹಂಚಿಕೆ, ಬಿಡಿಎ ಟೇಬಲ್ ಸ್ಕೀಮ್ ಗೆ ಭರ್ಜರಿ ರೆಸ್ಪಾನ್ಸ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ ದಿನವೇ ಫ್ಲ್ಯಾಟ್ ಹಂಚಿಕೆ ಮಾಡುವುದಕ್ಕಾಗಿ ಶುಕ್ರವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ ದಿನವೇ ಫ್ಲ್ಯಾಟ್ ಹಂಚಿಕೆ ಮಾಡುವುದಕ್ಕಾಗಿ ಶುಕ್ರವಾರ ಆರಂಭಿಸಿದ್ದ ಟೇಬಲ್ ಸ್ಕೀಮ್ ಗೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಅರ್ಜಿ ಸಲ್ಲಿಸಿ ಫ್ಲ್ಯಾಟ್ ಪಡೆಯುವುದಕ್ಕಾಗಿ ಇಂದು ಬೆಳಗ್ಗೆ 9 ಗಂಟೆಯಿಂದಲೇ ನೂರಾರು ಜನ ಬಿಡಿಎ ಕಚೇರಿಯತ್ತ ಆಗಮಿಸಿದ್ದರು. ಆದರೆ ಬಿಡಿಎ 12.30ಕ್ಕೆ ಟೇಬಲ್ ಸ್ಕೀಮ್ ಗೆ ಚಾಲನೆ ನೀಡಿತು.
ಬಿಡಿಎ ಒಟ್ಟು 2,705 ಫ್ಲ್ಯಾಟ್ ಗಳನ್ನು ಹಂಚಿಕೆ ಮಾಡುವುದಕ್ಕಾಗಿ ಗುಟ್ಟಹಳ್ಳಿಯ ಪ್ರಧಾನ ಕಚೇರಿಯಲ್ಲಿ ಚಾಲನೆ ನೀಡಿದೆ. ಆರಂಭಿಕ ಡೆಪಾಸಿಟ್ ಪಾವತಿಸಿ ಅವಶ್ಯಕತೆಯಿರುವ ದಾಖಲಾತಿಗಳನ್ನು ನೀಡಿದವರಿಗೆ ಇಂದೇ ಫ್ಲ್ಯಾಟ್ ಕೂಡ ಹಂಚಿಕೆ ಮಾಡಲಾಗಿದೆ.
ಈ ಹೊಸ ಯೋಜನೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ನಮ್ಮ ನಿರೀಕ್ಷೆಗೂ ಮೀರಿದೆ ಎಂದು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಹೇಳಿದ್ದಾರೆ.
ಬಿಡಿಎ ಕಚೇರಿ ಆವರಣದಲ್ಲಿರುವ ಕೇನರಾ ಬ್ಯಾಂಕ್ ನಲ್ಲಿ ಬಿಡಿಎ ಟೇಬಲ್ ಸ್ಕೀಮ್ ಅರ್ಜಿಗಳ ದೊರೆಯುತ್ತಿದ್ದು, ಇಂದು ಮಧ್ಯಾಹ್ನ 2 ಗಂಟೆಯವರೆಗೆ ಸುಮಾರು 200 ಅರ್ಜಿಗಳನ್ನು ನೀಡಲಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ ಎನ್ ರಾವ್ ಅವರು ತಿಳಿಸಿದ್ದಾರೆ. 
ವಲಗೇರಹಳ್ಳಿ, ಆಲೂರು, ಮಾಳಗಾಳ, ಕಣಿಮಿಣಿಕೆ, ಕೊಮ್ಮಘಟ್ಟ, ಮತ್ತು ದೊಡ್ಡಬನಹಳ್ಳಿಯಲ್ಲಿ ಒಟ್ಟು 2,705 ಫ್ಲ್ಯಾಟ್ ಗಳಿದ್ದು,  176 ಒಂದು ಬಿಎಚ್ ಕೆ ಮತ್ತು 139 ಮೂರು ಬಿಎಚ್ ಕೆ ಫ್ಲ್ಯಾಟ್ ಗಳಿದ್ದು, ಉಳಿದವೆಲ್ಲಾ ಎರಡು ಕೊಠಡಿಯುಳ್ಳ ಫ್ಲ್ಯಾಟ್ ಗಳಾಗಿವೆ ಎಂದು ಬಿಡಿಎ ಸೂಪರಿಂಟೆಂಡ್ ಇಂಜಿನೀಯರ್ ಎನ್,ಜಿ ಗೌಡಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com